

ಶ್ರೀ ಶೈವಾಗಮ
ಆದೇರ್ವರ್ಗಸ್ಯ ವೀರಸ್ಯ ಪ್ರೇತಕರ್ಮ ನ ವಿದ್ಯತೇ | ದಹನಂ ಚೈವ ಸಾಪಿಂಡ್ಯಂ ನೈತೇಷಾಂ ಸಂಮತೇ ತತಃ ||
ಆದಿಶೈವ, ಮಾರ್ಗಶೈವ, ವೀರಶೈವ ಇವರಿಗೆ ಪ್ರೇತಕರ್ಮ ಇರುವುದಿಲ್ಲ. ಶಿವಾಧೀನರಾದ ನಂತರ ಇವರ ಪಾರ್ಥಿವ ಶರೀರವನ್ನು ದಹಿಸುವುದಿಲ್ಲ ಮತ್ತು ಪಿಂಡಪ್ರದಾನ ಮೊದಲಾದ ಕರ್ಮಗಳನ್ನು ಆಚರಿಸುವುದಿಲ್ಲ. ‘ಏಕೇನ ಜನ್ಮನಾ ಮುಕ್ತಿಃ ವೀರಾಣಾಂ ತು ಮಾಹೇಶ್ವರಿ’ ಎಂಬ ಆಗಮದ ಉಕ್ತಿಯಂತೆ ವೀರಶೈವರಿಗೆ ಒಂದೇ ಜನ್ಮದಲ್ಲಿ ಮುಕ್ತಿ ದೊರೆಯುವುದರಿಂದ ಇವರಿಗೆ ಪ್ರೇತಾದಿ ಕರ್ಮಗಳ ಆವಶ್ಯಕತೆ ಇರುವುದಿಲ್ಲ. ಶರೀರದಲ್ಲಿ ಪೃಥ್ವಿಯ ಅಂಶವೇ ಆಧಿಕವಾಗಿರುವುದರಿಂದ ಮತ್ತು ಜಗತ್ತಿನ ಎಲ್ಲ ಪ್ರಾಣಿಗಳು ಮರಣಾನಂತರ ಭೂಮಿಯಲ್ಲಿಯೇ ಲೀನವಾಗುವುದರಿಂದ ದಹನಕ್ಕಿಂತ ಭೂಮಿಯಲ್ಲಿ ಸಮಾಧಿ ಮಾಡುವುದು ಸೂಕ್ತ ಮತ್ತು ಪ್ರಾಕೃತಿಕ ಎನಿಸುತ್ತದೆ.
| ಚಂದ್ರಜ್ಞಾನಾಗಮ (10.52) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು