ಅಮೃತಬಿಂದು: ಎಲ್ಲ ಮಂತ್ರಗಳಿಗೂ ಶಿವಪಂಚಾಕ್ಷರ ಮಂತ್ರವೇ ಮೂಲ

Sudina-7-Amrutabindu
Published on

ಶ್ರೀ ಶೈವಾಗಮ

ಯಜ್ಜಪೋ ಮೂಲಮಂತ್ರಸ್ಯ ಮನಸಾ ಕ್ರಿಯತೇ ಸದಾ | ಶೀಲಮೇತತ್ ಸೇವ್ಯಮಷ್ಟಪಂಚಾಶಮವಧಾರಿತಮ್ ||

ಮೂಲಮಂತ್ರವೆಂದು ಕರೆಯಲ್ಪಡುವ ಪಂಚಾಕ್ಷರ ಮಹಾಮಂತ್ರವನ್ನು ಮಾನಸಿಕವಾಗಿ ಜಪಿಸುವುದು ಐವತ್ತೆಂಟನೆಯ ಶೀಲ. ಎಲ್ಲ ಮಂತ್ರಗಳಿಗೆ ಶಿವಪಂಚಾಕ್ಷರ ಮಂತ್ರವು ಮೂಲವಾದ ಕಾರಣ ಅದನ್ನು ಮೂಲಮಂತ್ರವೆಂದು ಕರೆಯುತ್ತಾರೆ. ವಾಚಿಕ, ಉಪಾಂಶು, ಮಾನಸ ಎಂಬ ಮೂರು ಜಪಗಳಲ್ಲಿ ತುಟಿ, ನಾಲಗೆ ಮುಂತಾದ ಯಾವುದೇ ಅವಯವಗಳನ್ನು ಬಳಸದೆ ಮನದಲ್ಲೇ ಮಂತ್ರಾಕ್ಷರಗಳನ್ನು ಮನನ ಮಾಡುವುದು ಮಾನಸ ಜಪ. ಈ ಜಪದಿಂದ ಮನಸ್ಸು ಚಾಂಚಲ್ಯವನ್ನು ಕಳೆದುಕೊಂಡು ಏಕಾಗ್ರತೆ ಹೊಂದಲು ಸಾಧ್ಯವಾಗುತ್ತದೆ.

| ಚಂದ್ರಜ್ಞಾನಾಗಮ (9.116) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net