

ಮೂಲತೋ ಮಂತ್ರಿತೇನಾಥ ಸಜಲೇನೈವ ಭಸ್ಮನಾ | ಬಿಭೃಯಾಚ್ಚ ತ್ರಿಪುಂಡ್ರಾಣಿ ದ್ವಾತ್ರಿಂಶತ್ ಸ್ಥಾನಕೇಷು ಚ ||
ಮೂಲ(ಪಂಚಾಕ್ಷರ)ಮಂತ್ರವನ್ನು ಜಪಿಸುತ್ತ ಸಜಲಭಸ್ಮದಿಂದ ಶರೀರದ ಮೂವತ್ತೆರಡು ಸ್ಥಾನಗಳಲ್ಲಿ ತ್ರಿಪುಂಡ್ರಗಳನ್ನು ಧರಿಸಿಕೊಳ್ಳಬೇಕು. ಶಿರಸ್ಸು, ಹಣೆ, ಎರಡೂ ಕಿವಿಗಳು, ಎರಡೂ ಕಣ್ಣುಗಳು, ಎರಡೂ ಮೂಗಿನ ಹೊರಳೆಗಳು, ಮುಖ, ಕತ್ತು, ಎರಡೂ ಭುಜ, ಎರಡೂ ಮೊಣಕೈಗಳು, ಎರಡೂ ಮಣಿಕಟ್ಟುಗಳು, ಎದೆ, ಎರಡೂ ಪಕ್ಕೆಗಳು, ನಾಭಿ, ಗುದ, ಗುಹ್ಯ, ಎರಡೂ ತೊಡೆಗಳು, ಎರಡೂ ನಿತಂಬಗಳು, ಎರಡೂ ಮೊಣಕಾಲುಗಳು, ಎರಡೂ ಮೀನಗಂಡಗಳು ಮತ್ತು ಎರಡೂ ಪಾದಗಳು. ಇವು ತ್ರಿಪುಂಡ್ರ ಭಸ್ಮವನ್ನು ಧರಿಸಿಕೊಳ್ಳಬೇಕಾದ ದೇಹದ ಮೂವತ್ತೆರಡು ಸ್ಥಾನಗಳು.
| ಚಂದ್ರಜ್ಞಾನಾಗಮ (11.12)
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು