ಅಮೃತ್​ಪಾಲ್​ ಸಿಂಗ್​ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ; ಪಟಿಯಾಲದಲ್ಲಿ ಅಡಗಿರುವ ಶಂಕೆ?

ipiccy
Published on

ಪಂಜಾಬ್​​: ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್​ ಪಟಿಯಾಲದಲ್ಲಿ ಮೊಬೈಲ್​ನಲ್ಲಿ ಮಾತನಾಡುತ್ತ ಓಡಾಡುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೊದಲ ವಿಡಿಯೋದಲ್ಲಿ ಕಂಡು ಬರುವ ಹಾಗೆ ಅಮೃತ್​ಪಾಲ್​ ಬಿಳಿ ಬಣ್ಣದ ವಸ್ತ್ರದಿಂದ ತನ್ನ ಮುಖವನ್ನು ಮರೆಮಾಚಿಕೊಂಡು ಕೈಯಲ್ಲಿ ಒಂದು ಬ್ಯಾಗ್​ ಹಿಡಿದು ಹೋಗುತ್ತಿರುವ ದೃಶ್ಯ ಕಂಡು ಬರುತ್ತದೆ. ಈತನ ಜೊತೆಯಲ್ಲಿ ಸಹಚರ ಪಪಲ್​ಪ್ರೀತ್​ ಸಿಂಗ್​ ಇರುವುದು ಮೊದಲ ವಿಡಿಯೋದಲ್ಲಿ ಕಂಡು ಬರುತ್ತದೆ.

ಮತ್ತೊಂದು ವಿಡಿಯೋದಲ್ಲಿ ಕಂದು ಬಣ್ಣದ ಜಾಕೆಟ್​ ಧರಿಸಿರುವ ಅಮೃತ್​ಪಾಲ್​ ಒಂದೇ ಸ್ಥಳದಲ್ಲಿ ಏಕಾಂಗಿಯಾಗಿ ಫೋನಿನಲ್ಲಿ ಮಾತನಾಡುತ್ತಿರುವುದು ಕಂಡು ಬರುತ್ತದೆ. ಆದರೆ, ಈ ಬಗ್ಗೆ ಪಂಜಾಬ್ ಪೊಲೀಸರು ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ.

ಗುರುವಾರ ಹರಿಯಾಣದ ಕುರುಕ್ಷೇತ್ರದ ಶಹಬಾದ್​ನಲ್ಲಿ ಮನೆಯೊಂದರಲ್ಲಿ ಅಮೃತ್​ಪಾಲ್​ ಹಾಗೂ ಪಪಲ್​ಪ್ರೀತ್​ ಸಿಂಗ್​ಗೆ ಆಶ್ರಯ ನೀಡಿದ ಅನುಮಾದ ಮೇರೆಗೆ ಪೊಲೀಸರು ಬಲ್ಜಿತ್​ ಕೌರ್​ ಎಂಬ ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net