ಅಮೃತಬಿಂದು; ಧೃತಿ ಎಂಬುದು ನಲವತ್ಮೂರನೇ ಶೀಲ

Sudina-7-Amrutabindu
Published on

ಶ್ರೀ ಶೈವಾಗಮ

ಆಪದ್ಯಪಿ ದುರಂತಾಯಾಂ ಧರ್ಮಸ್ಯ ಯದವರ್ಜನಂ | ಧೃತ್ಯಾಖ್ಯಂ ಶೀಲಮೇತತ್ ತ್ರಿಚತ್ವಾರಿಂಶಂ ಪ್ರಕೀರ್ತಿತಮ್ ||

ಆಪತ್ತುಗಳು ಅಪ್ಪಳಿಸಿದಾಗ, ದುರಂತಗಳು ಎದುರಾದಾಗ ಧರ್ಮವನ್ನು ಬಿಡದಿರುವುದು ಧೃತಿ ಎಂದು ಕರೆಯಲ್ಪಡುವ ನಲವತ್ಮೂರನೆಯ ಶೀಲ. ನಮ್ಮ ಒಳ್ಳೆಯತನವನ್ನು ಒರೆಗಲ್ಲಿಗೆ ಹಚ್ಚುವುದಕ್ಕಾಗಿಯೇ ಕಷ್ಟಗಳು ಬರುತ್ತವೆ. ಆ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಧೈರ್ಯದಿಂದ ಧರ್ಮಮಾರ್ಗದಲ್ಲಿ ಮುನ್ನಡೆಯಬೇಕು. ಧೃತಿ ಎಂದರೆ ಧೈರ್ಯ ಎಂದರ್ಥ. ಇನ್ನೊಬ್ಬರನ್ನು ನೀರಿನಲ್ಲಿ ಮುಳುಗಿಸಲೂ ಧೈರ್ಯ ಬೇಕು ಮತ್ತು ಮುಳುಗುತ್ತಿರುವವರನ್ನು ಮೇಲೆತ್ತಲೂ ಧೈರ್ಯವೇ ಬೇಕು. ಆದರೆ ನಮ್ಮ ಧೈರ್ಯವನ್ನು ಬೇರೆಯವರಿಗೆ ಕಷ್ಟ ನೀಡುವಲ್ಲಿ ತೋರದೆ ಇತರರ ಕಷ್ಟಗಳನ್ನು ನಿವಾರಿಸುವಲ್ಲಿ ತೋರಿಸಬೇಕು.

| ಚಂದ್ರಜ್ಞಾನಾಗಮ (9.101) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net