

ಶ್ರೀ ಶೈವಾಗಮ
ಬ್ರಾಹ್ಮೇ ಮುಹೂರ್ತೆ ಉತ್ಥಾಯ ನೇತ್ರಯೋರಿಷ್ಟಲಿಂಗಕಂ | ಸ್ಪರ್ಶಯನ್ನೀಶ್ವರಂ ಸಾಂಬಂ ಕಾರ್ಯಂ ವಿಚಾರ್ಯ ಚ || ಬಹಿರ್ವಿದಿಶಮಾಗ್ನೇಯೀಂ ಗಚ್ಛೇದಾರಾದತಂದ್ರಿತಃ ||
ಇನ್ನು ವೀರಶೈವರ ದೈನಂದಿನ ಆಚರಣೆಗಳ ಬಗ್ಗೆ ತಿಳಿಸಲಾಗುತ್ತದೆ. ಬ್ರಾಹ್ಮೀಮುಹೂರ್ತದಲ್ಲಿ ಎದ್ದು, ಇಷ್ಟಲಿಂಗವನ್ನು ಎರಡೂ ಕಣ್ಣುಗಳಿಗೆ ಸ್ಪರ್ಶಿಸಿಕೊಳ್ಳುತ್ತ ಶಕ್ತಿವಿಶಿಷ್ಟನಾದ ಶಿವನನ್ನು ಸ್ಮರಿಸಿಕೊಳ್ಳಬೇಕು. ನಂತರ ಸಮಾಧಾನಚಿತ್ತದಿಂದ ಆ ದಿನ ಮಾಡಬೇಕಾದ ಕಾರ್ಯಗಳನ್ನು ನೆನಪಿಸಿಕೊಳ್ಳಬೇಕು.
ನಂತರ ಶೌಚಕ್ಕಾಗಿ (ಮನೆಯಲ್ಲಿ ಶೌಚಗೃಹವಿಲ್ಲದಿದ್ದರೆ) ಆಗ್ನೇಯ ದಿಕ್ಕಿಗೆ ಬೇಸರಿಸಿಕೊಳ್ಳದೆ ದೂರದವರೆಗೆ ಹೋಗಬೇಕು. ಅಂತೆಯೇ ಈಗಲೂ ವಾಸ್ತುತಜ್ಞರು ಮನೆಯ ವಾಯವ್ಯ ಇಲ್ಲವೇ ಆಗ್ನೇಯ ದಿಕ್ಕಿನಲ್ಲಿ ಶೌಚಗೃಹ ನಿರ್ವಿುಸುವುದು ಸೂಕ್ತ ಎನ್ನುತ್ತಾರೆ.
| ಚಂದ್ರಜ್ಞಾನಾಗಮ (11.3) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು