ಅಮೃತಬಿಂದು: ದಿನದ ಎರಡನೇ ಭಾಗವನ್ನು ವೇದ, ಅಧ್ಯಯನಕ್ಕೆ ಮೀಸಲಿಡಿ...

Sudina-7-Amrutabindu
Published on
ಶ್ರೀ ಶೈವಾಗಮ

ಭಾಗೇ ದ್ವಿತೀಯೇ ನಿಗಮಾನಭ್ಯಸೇದಾಗಮಾನಪಿ | ಅಧ್ಯಾಪಯೇಚ್ಚ ಶಾಸ್ತ್ರಾಣಿ ಸಮಿಧಾದೀನಿ ಚಾಹರೇತ್ ||ಪುಷ್ಪಾಣಿ ಬಿಲ್ವಪತ್ರಾಣಿ ಶ್ರೀಗಂಧಪ್ರಮುಖಾನಿ ಚ ||

ದಿನದ ಎರಡನೆಯ ಭಾಗದಲ್ಲಿ ವೇದ ಮತ್ತು ಆಗಮಗಳನ್ನು ಅಧ್ಯಯನ ಮಾಡಬೇಕು. ತಾನು ತಿಳಿದಿರುವ ಶಾಸ್ತ್ರದ ವಿಚಾರಗಳನ್ನು ಇತರರಿಗೆ ಹೇಳಿಕೊಡಬೇಕು. ಹೋಮ ಹವನ ಮಾಡುವವರು ಅದಕ್ಕೆ ಬೇಕಾದ ಸಮಿತ್ತುಗಳನ್ನು ಸಂಗ್ರಹಿಸಬೇಕು, ಶಿವಪೂಜೆಗೆ ಅಗತ್ಯವಿರುವ ಹೂ, ಬಿಲ್ವಪತ್ರೆ, ಶ್ರೀಗಂಧ ಮೊದಲಾದವನ್ನು ಸಂಗ್ರಹಿಸಬೇಕು. ‘ಆದ್ಯಂ ಅಷ್ಟಾಂಶಕಮಹ್ನಃ’ ಎಂಬ ಉಕ್ತಿಯಂತೆ ದಿನವನ್ನು ಎಂಟು ಭಾಗಗಳಾಗಿ ವಿಂಗಡಿಸಿದಾಗ ಅದರಲ್ಲಿ ಮೊದಲನೆಯದು ಅರುಣೋದಯ ಕಾಲ. ಅನಂತರದ 2 ಗಂಟೆ 48 ನಿಮಿಷದ ಸಮಯಕ್ಕೆ ಮಧ್ಯಭಾಗ ಎನ್ನುತ್ತಾರೆ.

| ಚಂದ್ರಜ್ಞಾನಾಗಮ (11.58) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net