

ಶ್ರೀ ಶೈವಾಗಮ
ಪ್ರಾಣಿದುಃಖಸ್ಯ ವೀಕ್ಷಾಯಾಮಕ್ಷಮತ್ವಂ ದಯಾಭಿಧಂ | ಶೀಲಂ ಪ್ರಸಿದ್ಧಮೇಕೋನಚತ್ವಾರಿಂಶಂ ಪ್ರಕೀರ್ತಿತಮ್ ||
ಪ್ರಾಣಿಗಳ ದುಃಖವನ್ನು ಕಂಡಾಗ ಸಹಿಸದೆ ತಕ್ಷಣವೇ ನೆರವಿಗೆ ಧಾವಿಸುವ ಮನೋಭಾವನೆಯು ದಯೆ ಎಂದು ಕರೆಯಲ್ಪಡುವ ಮೂವತ್ತೊಂಬತ್ತನೆಯ ಶೀಲ. ‘ದಯವೇ ಧರ್ಮದ ಮೂಲ’ ಎಂಬ ಬಸವಣ್ಣನವರ ಉಕ್ತಿಯಂತೆ ಪ್ರತಿಯೊಂದು ಧರ್ಮಕ್ಕೆ ದಯಾಭಾವವೇ ಅಡಿಪಾಯ. ದಯೆಯು ಸಹಾನುಭೂತಿಯಿಂದ ಪ್ರಾರಂಭವಾಗಿ ಸಮಾನುಭೂತಿಯಲ್ಲಿ ಪೂರ್ಣಗೊಳ್ಳುತ್ತದೆ. ಬೇರೆಯವರ ದುಃಖವನ್ನು ನೋಡಿ ಕನಿಕರಪಟ್ಟು ಅವರಿಗೆ ಸಾಂತ್ವನ ಹೇಳುವುದು ಸಹಾನುಭೂತಿ. ಇತರರ ದುಃಖವನ್ನು ಕಂಡು ತಾನೂ ಅವರಷ್ಟೇ ದುಃಖ ಅನುಭವಿಸುವುದು ಸಮಾನುಭೂತಿ.
| ಚಂದ್ರಜ್ಞಾನಾಗಮ (9.97) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು