ಅಮೃತಬಿಂದು; ಅಹಿಂಸೆಯೆಂಬುದು ಪ್ರತಿಯೊಂದು ಧರ್ಮದ ಪ್ರಮುಖ ಅಂಗ

Sudina-7-Amrutabindu
Published on

ಶ್ರೀ ಶೈವಾಗಮ

ಪ್ರಾಣಿನೋ ಯಸ್ಯ ಕಸ್ಯಾಪಿ ನ ಬಾಧಾಕರಣಂ ಹಿ ತತ್ | ಅಹಿಂಸಾಖ್ಯಮಿದಂ ಶೀಲಮಷ್ಟತ್ರಿಂಶಂ ಸಮೀರಿತಮ್ ||

ಯಾವುದೇ ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ನೋವನ್ನುಂಟುಮಾಡದ ಆಚರಣೆಯು ಅಹಿಂಸೆಯೆಂದು ಕರೆಯಲ್ಪಡುವ ಮೂವತ್ತೆಂಟನೆಯ ಶೀಲ. ಅಹಿಂಸೆಯು ಪ್ರತಿಯೊಂದು ಧರ್ಮದ ಪ್ರಮುಖ ಅಂಗ. ಶಾರೀರಿಕ, ವಾಚಿಕ, ಮಾನಸಿಕ ಎಂದು ಹಿಂಸೆಯಲ್ಲಿ ಮೂರು ಪ್ರಕಾರ. ಶರೀರದ ಅವಯವಗಳಿಂದ ಬೇರೆಯವರಿಗೆ ತೊಂದರೆಗಳನ್ನು ಉಂಟುಮಾಡುವುದು ಶಾರೀರಿಕ. ನಿಂದೆ, ಬೈಗುಳ ಮುಂತಾದವುಗಳ ಮೂಲಕ ಇತರರಿಗೆ ನೋವು ಉಂಟುಮಾಡುವುದು ವಾಚಿಕ. ಮನಸ್ಸಿನಿಂದಲೇ ಇತರರಿಗೆ ಕೇಡು ಬಯಸುವುದು ಮಾನಸಿಕ. ಈ ಮೂರರಿಂದಲೂ ಯಾರಿಗೂ ಹಿಂಸೆ ಮಾಡದಿರುವುದೇ ಅಹಿಂಸೆ.

| ಚಂದ್ರಜ್ಞಾನಾಗಮ (9.96) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net