

ವಿಜಯಪುರ: ಜ್ಞಾನ ಸುಧೆಯಿಂದ ಹರಿದು ಬರುವ ಅಮೃತವನ್ನು ವಿದ್ಯಾರ್ಥಿಗಳು ಸವಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಸಲಹೆ ನೀಡಿದರು.
ನಗರದ ಸದಾಶಿವ ನಗರದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಸಭಾಭವನದಲ್ಲಿ ವಿಜಯಪುರದ ಎಕ್ಸಲೆಂಟ್ ಸಮೂಹ ಸಂಸ್ಥೆ ಪ್ರಾಯೋಜಕತ್ವ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ವಿಜಯವಾಣಿ ಪತ್ರಿಕೆ ಬುಧವಾರ ಹಮ್ಮಿಕೊಂಡಿದ್ದ ಎಜುಕೇಷನ್ ಎಕ್ಸಪೋ ದಲ್ಲಿ ಅಧಿಕ ಅಂಕ ಗಳಿಸುವ ವಿಧಾನ ಕುರಿತು ಮಾಹಿತಿ ನೀಡಿದರು.
ಒಂದನೇ ತರಗತಿಯಿಂದ ಹತ್ತು ವರ್ಷ ನಿರಂತರ ಅಭ್ಯಾಸ ಮಾಡಿದಾಗಲೂ ಎಸ್ಎಸ್ಎಲ್ಸಿ ಪರೀೆಯಲ್ಲಿ ಕಡಿಮೆ ಅಂಕ ಪಡೆಯುದ್ಯಾಕೆ ಎಂದು ಪ್ರಶ್ನಿಸಿದ ಅವರು,ಇಷ್ಟು ವರ್ಷ ನಾವು ಸಾಧಿಸಿದ್ದೇನು ಎಂದು ಆತ್ಮಾವಲೋಕನ ಮಾಡಿಕೊಂಡಾಗ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದರು.
ಜಿಲ್ಲೆಯಲ್ಲಿ ಇಂಗ್ಲಿಷ್ ವಿಷಯದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುತ್ತಾರೆ ಹಾಗೂ ಇದೇ ವಿಷಯದಲ್ಲಿ ಹೆಚ್ಚು ೇಲಾಗುತ್ತಿದ್ದಾರೆ. ಅಂದರೆ ಇಂಗ್ಲಿಷ್ ವಿಷಯದ ಬಗ್ಗೆ ಮಕ್ಕಳಲ್ಲಿ ಭಯವಿದೆ ಎಂದರ್ಥ. ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜಗತ್ತಿನಲ್ಲಿ ಗಣಿತವು ಅತಿ ಸುಲಭದ ವಿಷಯವಾಗಿದೆ. ಆದರೆ ಪರೀೆ ಸಮಯದಲ್ಲಿ ಹೇಗೆ ಬರಿಯಬೇಕು ಎಂಬ ಜ್ಞಾನ ಹೊಂದಿರಬೇಕು. ಉತ್ತರ ಬರದಿದ್ದಾಗ ಕೇವಲ ಾಮೂರ್ಲಾ ಬರಿದರೂ ಸಾಕು ಒಂದು ಅಂಕ ಬೀಳುತ್ತವೆ. ಚಿತ್ರ ಇಳಿಸದರೆ 4 ಅಂಕ ಬರುತ್ತವೆ. ಒಂದು ಅಂಕದ 8 ಪ್ರಶ್ನೆಗಳಿರುತ್ತವೆ ಅದರಲ್ಲ್ಲಿ ಐದು ಸರಿ ಉತ್ತರ ಬರೆದರೆ ಐದು ಅಂಕ ಬರುತ್ತವೆ. ಹೀಗೆ 20 ಅಂಕ ಸರಳವಾಗಿ ಗಳಿಸಬಹುದಾಗಿದೆ. ಇಂಥ ಸುಲಭ ಉಪಾಯವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು ಎಂದರು.
ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ಆತ್ಮ ವಿಶ್ವಾಸದಿಂದ ಮುಂದೆ ಸಾಗಬೇಕು. ನಿಮ್ಮ ಲಿತಾಂಶ ನಿಮ್ಮ ಕೈಯಲ್ಲಿದೆ. ಅಂಕಗಳು ನಿಮ್ಮ ಜೇಬಿನಲ್ಲಿವೆ. ಲಿತಾಂಶ, ಅಂಕ ಗಳಿಕೆಯ ಲದಲ್ಲಿ ನಿಮ್ಮ ಭವಿಷ್ಯ ಅಡುಗಿದೆ ಎಂದರು.
ಸುಮಾರು ಒಂದು ತಾಸು ನಿರರ್ಗಳವಾಗಿ ಮಕ್ಕಳಿಗೆ ಪಾಠ ಮಾಡಿ, ಹೆಚ್ಚು ಅಂಕ ಹೇಗೆ ಪಡೆಯಬೇಕು ಎಂಬ ಸಮಗ್ರ ಮಾಹಿತಿಯನ್ನು ನೀಡಿದರು.
ವಿಜಯಪುರದಲ್ಲಿ ಆಯೋಜಿಸಿದ್ದ ಎಜುಕೇಷನ್ ಎಕ್ಸಪೋ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿದರು.