ರಾಜ್ಯಕ್ಕೆ ಮತ್ತೊಮ್ಮೆ ಚಾಣಕ್ಯ; ಎರಡು ದಿನಗಳ ಪ್ರವಾಸ ನಡೆಸಲಿರುವ ಅಮಿತ್ ಷಾ!

amith shah
Published on

ಬೆಂಗಳೂರು: ಇಂದು ರಾತ್ರಿ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ರಾಜ್ಯ ಬರಲಿದ್ದಾರೆ. ಇಂದು ರಾತ್ರಿ ಬೀದರ್ ಗೆ 'ಆಗಮಿಸಲಿರುವ ‘ಚಾಣಕ್ಯ’ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿ ನಾಳೆ ಮತ್ತು ನಾಡಿದ್ದು ಎರಡು ದಿನ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ.

ಈ ಎರಡು ದಿನಗಳ ಕಾಲ ಬೀದರ್, ರಾಯಚೂರು, ಬೆಂಗಳೂರಿನಲ್ಲಿ ಪ್ರವಾಸ ಮಾಡಲಿರುವ ಅಮಿತ್ ಷಾ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ನಾಳೆ ಬೀದರ್ ನಲ್ಲಿ ಗೊರಟ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮಾರಕವನ್ನು ಅಮಿತ್ ಷಾ ಲೋಕಾರ್ಪಣೆ ಮಾಡಲಿದ್ದು ಬೀದರ್ ನಲ್ಲಿ 103 ಅಡಿ ರಾಷ್ಟ್ರಧ್ವಜ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಬೀದರ್ ನಿಂದ ಮಧ್ಯಾಹ್ನ ರಾಯಚೂರಿಗೆ ಪ್ರಯಾಣ ಬೆಳೆಸಿ ಅಲ್ಲಿನ  ದೇವದುರ್ಗ ಗೆಬ್ಬೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ ಆಗಲಿದ್ದಾರೆ.

ಅದಾದ ಮೇಲೆ ರಾಯಚೂರಿನಿಂದ ಬೆಂಗಳೂರಿಗೆ ಅಮಿತ್ ಷಾ ಆಗಮಿಸಲಿದ್ದಾರೆ. ಈ ಸಂದರ್ಭ ಬೆಂಗಳೂರಿನ ತಾಜ್ ಹೊಟೇಲ್ ನಲ್ಲಿ ಗುಜರಾತಿ ಸಮುದಾಯದ ಜೊತೆ ಸಂವಾದ ನಡೆಸಲಿದ್ದಾರೆ. 6.30 ರಿಂದ 7.30ವರೆಗೆ ಬೆಂಗಳೂರು ಉತ್ಸವ ಸಮಾರೋಪ ದಲ್ಲಿ ಭಾಗಿಯಾಗಿ ಬಳಿಕ ಕೆಂಪೇಗೌಡ ಮತ್ತು ಬಸವಣ್ಣ ಪ್ರತಿಮೆ ಲೋಕಾರ್ಪಣೆ ‌ಮಾಡಲಿದ್ದಾರೆ.

ನಾಳೆ ರಾತ್ರಿ 8.30 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಟಿಕೆಟ್ ಸಂಬಂಧ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಂತೆರ 27 ಮಾರ್ಚ್ ಬೆಳಗ್ಗೆ 9 ಕ್ಕೆ ದೆಹಲಿ ಪ್ರಯಾಣ ಬೆಳೆಸಿ ಅಮಿತ್ ಷಾ ನಿರ್ಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net