ರಾಜ್ಯದಲ್ಲಿ ಕಮಲ ಅರಳಿಸಲು ಬೆಂಗಳೂರಲ್ಲೇ ಮನೆ ಮಾಡಲಿರುವ ಅಮಿತ್ ಷಾ!

R Ashok speaking about Amit shah
Published on

ಬಾಗಲಕೋಟೆ: ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು ನಾಯಕರ ಜಿದ್ದಾ ಜಿದ್ದಿ, ಆರೋಪ-ಪ್ರತ್ಯಾರೋಪಗಳು ಎಲ್ಲೆಲ್ಲೂ ಕೇಳಿಬರುತ್ತಿದೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಎಂದು ಹಠ ಹಿಡಿದಿರುವ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಕಂದಾಯ ಆರ್​ ಅಶೋಕ್​ ಹೇಳಿಕೆ ನೀಡಿದ್ದು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದೆ.

'ರಾಜ್ಯದಲ್ಲಿ ಮತ್ತೆ ಕಮಲ ಪಕ್ಷ ಅರಳಿಸಲು ಕೇಂದ್ರ ನಾಯಕರು ಮೆಗಾ ಪ್ಲಾನ್ ನಡೆಸುತ್ತಿದ್ದು ರಾಜ್ಯದಲ್ಲೇ ಬಿಜೆಪಿ ಚಾಣಕ್ಯ ಠಿಕಾಣಿ ಹೂಡಲಿದ್ದಾರೆ. ಡಬಲ್ ಇಂಜನ್ ಸರ್ಕಾರ ತರಲು ಬೆಂಗಳೂರಲ್ಲಿ ಅಮಿತ್ ಷಾ ಹಾಗೂ ಧರ್ಮೆಂದ್ರ ಪ್ರಧಾನ ಮನೆ ಮಾಡುತ್ತಾರೆ' ಎಂದು ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕಂದಾಯ ಸಚಿವ ಆರ್ ಅಶೋಕ ಹೇಳಿಕೆ ನೀಡಿದ್ದಾರೆ.

'ಅವರು ಇಲ್ಲೆ ಬಂದು ಇರುತ್ತಾರೆ. ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಇಂದಿನ ಪಾರ್ಟಿ. ಅಮಿತ್ ಷಾ, ಧರ್ಮೇಂದ್ರ ಪ್ರಧಾನ ಎಲ್ಲರು ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಿದ್ದಾರೆ. ಅವರ (ಕಾಂಗ್ರೆಸ್) ರೀತಿ ಬಂದು ಬರೋದು ಭಾಷಣ ಮಾಡಿ ಓಡಿ ಹೋಗೋದಲ್ಲ. ಇಲ್ಲಿ ಬಂದು, ಇಲ್ಲೇ ಇರುತ್ತಾರೆ.

ಡಬಲ್ ಇಂಜೆನ್ ಸರ್ಕಾರ ಇಲ್ಲಿ ಬರ್ಬೇಕು ಅಂತಾ ಅವರೆಲ್ಲರ ಬಯಕೆ. ಸೂರ್ಯ ಚಂದ್ರರಿರೋದು ಎಷ್ಟು ಸತ್ಯವೋ, ನಮ್ಮ ಸರ್ಕಾರ ಬರೋದು ಸತ್ಯ. ಅಮಿತ್ ಷಾ ಬೆಂಗಳೂರಲ್ಲಿ ಮನೆ ಮಾಡುವುದು ಪಕ್ಕಾ. ಡೌಟೇ ಇಲ್ಲ. ಯಾಕೆ ಬರ್ತಾರೆ ಎಂದ್ರೆ ಗಲ್ತೀವಿ ಅನ್ನೋ ದೃಷ್ಟಿಯಿಂದ ಬರ್ತಾರೆ' ಎಂದು ಈ ಸಂದರ್ಭ ಆರ್. ಅಶೋಕ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net