

ಬಾಲಿವುಡ್ನ ಬಚ್ಚನ್ ಫ್ಯಾಮಿಲಿಗೆ ಕರೊನಾ ಕಂಟಕವಾಗಿ ಕಾಡುತ್ತಿದೆ. ಇಂದು ಹಿರಿಯ ನಟ ಅಮಿತಾಭ್ ಬಚ್ಚನ್ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅಮಿತಾಭ್ ಬಚ್ಚನ್ ಅವರು ಟ್ವೀಟ್ ಮೂಲಕ ಅದನ್ನು ತಿಳಿಸಿದ್ದರು. ನನ್ನ ಮನೆಯವರಿಗೆಲ್ಲ ಟೆಸ್ಟ್ ಮಾಡಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ಇದೀಗ ಅಮಿತಾಭ್ ಬಚ್ಚನ್ ಪುತ್ರ, ನಟ ಅಭಿಷೇಕ್ ಬಚ್ಚನ್ ಅವರಲ್ಲೂ ಕರೊನಾ ಸೋಂಕು ದೃಢಪಟ್ಟಿದೆ. ಅಭಿಷೇಕ್ ಕೂಡ ಮುಂಬೈ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.
ಇಂದು ಸಂಜೆ ನನ್ನ ತಂದೆಯವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ನನ್ನ ತಪಾಸಣಾ ವರದಿಯೂ ಬಂದಿದೆ. ನನಗೂ ಕರೊನಾ ಸೋಂಕು ತಗುಲಿದೆ. ಇಬ್ಬರಲ್ಲೂ ಸ್ವಲ್ಪ ಮಟ್ಟಿಗಿನ ಲಕ್ಷಣ ಕಾಣಿಸಿಕೊಂಡಿದೆ. ಸಂಬಂಧಪಟ್ಟ ಆಡಳಿತಕ್ಕೆ ತಿಳಿಸಿದ್ದೇವೆ. ನಮ್ಮ ಪ್ರಾಥಮಿಕ ಸಂಪರ್ಕಕ್ಕೆ ಬಂದವರೂ ಟೆಸ್ಟ್ ಮಾಡಿಸಿಕೊಳ್ಳಿ. ಯಾರೂ ಪ್ಯಾನಿಕ್ ಆಗಬೇಡಿ. ಶಾಂತವಾಗಿರಿ ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)