ಇದು ನೋಡೋಕೆ ಸಣ್ಣದಾಗಿ ಕಾಣಬಹುದು ಆದ್ರೆ ತುಂಬಾ ಚೆನ್ನಾಗಿರುತ್ತೆ! Amitabh Reveals Favourite Street Food

Amitabh Bachchan
Published on

ಮುಂಬೈ: ( Amitabh Reveals Favourite Street Food ) ಬಾಲಿವುಡ್​​ ನಟ ಅಮಿತಾಬ್ ಬಚ್ಚನ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇವರು ತೆರೆ ಮೇಲೆ ಬಂದ್ರೆ ಇಂದು ಕೂಡಾ ಅಭಿಮಾನಿಗಳು ಶಿಳ್ಳೆ ಹಾಕುತ್ತಾರೆ. ಅಷ್ಟೋಂದು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ನಟ. ಇವರು ನಡೆಸಿಕೊಡುತ್ತಿರುವ 'kaun Bagen Crorpeti' ಶೋ ಇದೀಗ ತುಂಬಾ ಜನಮನ್ನಣೆ ಪಡೆಸಿರುವ ಕಾರ್ಯಕ್ರಮವಾಗಿದೆ.

ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಶೋ ಇವಾಗ 16 ನೇ ಸೀಸನ್​ಗೆ ಕಾಲಿಟ್ಟಿದೆ. ಈ ಸೀಸನ್​ನಲ್ಲಿ ಅಮಿತಾಬ್​ ಸ್ಪರ್ಧಿಯ ಜೊತೆಗೆ ಫುಡ್ ಟಾಫಿಕ್ ಮಾತಾಡುವಾಗ  ಮೊದಲ ಬಾರಿಗೆ ತಮಗೆ Street Food ಅಂದ್ರೆ ಇಷ್ಟಾ ಅಂತ ಹೇಳಿಕೊಂಡಿದ್ದಾರೆ. ರಸ್ತೆ ಬದಿ ಸಿಗುವ ವಡಾ ಪಾವ ಅಂದ್ರೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.

ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸುತ್ತಿರುವ ಗುಜರಾತ್​​ನ ಹರ್ಷಾ ಉಪಾಧ್ಯಾ, ಅವರು ಅಮಿತಾಬ್ ಅವರಿಗೆ ನೀವು ಕುರ್ಮಾ (Churma) ಅನ್ನು ಇಷ್ಟಪಡುತ್ತಿರಾ ಎಂದು ಕೇಳಿದರು. ಆಗ ಬಚ್ಚನ್ ನನಗೆ ಯಾವ ತಿಂಡಿ ತಿನಿಸುಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದ್ರೆ ನನಗೆ ವಡಾಪಾವ್ ಅಂದ್ರೆ ತುಂಬಾ ಇಷ್ಟಾ ಅದನ್ನು ನಾನು ತುಂಬಾ ಇಷ್ಟಾ ಪಟ್ಟು ತಿನ್ನುತ್ತೇನೆ ಎಂದರು.

ವಡಾಪಾವ್ ನೋಡೋಕೆ ಸಣ್ಣದಾಗಿ ಕಾಣಬಹುದು ಆದ್ರೆ ಅದು ತುಂಬಾ ಚೆನ್ನಾಗಿ ಸ್ವಾಧಿಷ್ಟವಾಗಿ ಇರುತ್ತದೆ. ನಾನು ಭಾರತದಲ್ಲಿ ಮಾತ್ರ ಅಲ್ಲ ಅಬ್ರಾಡ್​ಗೆ (Abroad) ಹೋದ್ರೂ ಅಲ್ಲಿಯೂ ಸಹ ವಡಾಪಾವ್ ತಿನ್ನುತ್ತೇನೆ ಎಂದರು.

ಈ ಹಿಂದೆಯೂ ಸಹ ಅಮೀತಾ ಬಚ್ಚನ್ ಅವರ ದಿ. ತಂದೆ ಡಾ ಹರಿವಂಶ ರೈ ಬಚ್ಚನ್ ಅವರೊಂದಿಗೆ ಬ್ಯೂಸಿನೆಸ್ ಸಲುವಾಗಿ ಉತ್ತರ ಪ್ರದೇಶ ಹಾಗು ಬಿಹಾರ ಹೋದಾಗ ಅಲ್ಲಿ ರೋಡ್ ಸೈಡ್ ಫುಡ್ ತಿನ್ನುವುದನ್ನು ಟ್ವೀಟ್​ರನಲ್ಲಿ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ತಮ್ಮ 80 ವರ್ಷದ ಹುಟ್ಟುಹಬ್ಬದಂದು ಪತ್ನಿ ಜಯಾ ಬಚ್ಚನ್ ಅವರೊಂದಿಗೆ Street Side ಲ್ಯಾಪ್ಸಿ (Lapsi) ತಿಂದು ಸಂಭ್ರಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net