ಕಥೆ ಇಷ್ಟವಾಗದಿದ್ರೂ ಸ್ನೇಹಕ್ಕೆ ಬೆಲೆ ಕೊಟ್ಟರು ಅಮಿತಾಭ್! ಫ್ಲಾಪ್​ ಆಗ್ತಿದ್ದ ಚಿತ್ರ ಬ್ಲಾಕ್​ಬಸ್ಟರ್​ ಆಗಿದ್ದೇ ರೋಚಕ | Amitabh Bachchan

ಕಥೆ ಇಷ್ಟವಾಗದಿದ್ರೂ ಸ್ನೇಹಕ್ಕೆ ಬೆಲೆ ಕೊಟ್ಟರು ಅಮಿತಾಭ್! ಫ್ಲಾಪ್​ ಆಗ್ತಿದ್ದ ಚಿತ್ರ ಬ್ಲಾಕ್​ಬಸ್ಟರ್​ ಆಗಿದ್ದೇ ರೋಚಕ | Amitabh Bachchan
Published on

ಮುಂಬೈ: ಬಾಲಿವುಡ್​ ಚಿತ್ರರಂಗದ ಹಿರಿಯ ನಟ, 'ಬಿಗ್ ಬಿ' ಎಂದೇ ಕರೆಯಲ್ಪಡುವ ಅಮಿತಾಭ್ ಬಚ್ಚನ್ (Amitabh Bachchan)​, ಸದ್ಯ ಚಿತ್ರಗಳಿಂದ ದೂರವಿದ್ದರೂ 'ಕೌನ್ ಬನೇಗಾ ಕರೋಡ್​ಪತಿ' ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮುಂದೆ ಇಂದಿಗೂ ಹಾಜರಾಗುತ್ತಿರುವುದು ಗಮನಾರ್ಹ. ಹಲವಾರು ಸೂಪರ್​ಹಿಟ್​, ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ನಟಿಸಿರುವ ಅಮಿತಾಭ್​, 1980ರಲ್ಲಿ ತಮ್ಮ ಪಾಲಿಗೆ ಬಂದಿದ್ದ ಸಿನಿಮಾವನ್ನು ಕಥೆ ಕೇಳ್ತಿದ್ದಂತೆ ಬೇಡ ಎಂದಿದ್ದರು.

ಸ್ನೇಹಕ್ಕೆ ಗೌರವ

ಚಿತ್ರದ ಕಥೆ ಕೇಳುತ್ತಿದ್ದಂತೆ ಆಫರ್​ ರಿಜೆಕ್ಟ್​ ಮಾಡಿದ್ದ ಬಿಗ್ ಬಿ, ನಂತರದಲ್ಲಿ ಸ್ನೇಹಿತನ ಮಾತಿಗೆ, ಸ್ನೇಹಕ್ಕೆ ಬೆಲೆ ಕೊಟ್ಟು ಸಿನಿಮಾಗೆ ಸಹಿ ಹಾಕಿದರು. ಆ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಫ್ಲಾಪ್​ ಆಯಿತು ಎನ್ನುವ ಹಂತಕ್ಕೆ ಹೋಗಿದ್ದೇ ಆದರೂ, ಜಾದೂ ಎಂಬಂತೆ ಪ್ರೇಕ್ಷಕರಿಂದ ತುಂಬಿ, ಬ್ಲಾಕ್​ಬಸ್ಟರ್​ ಆಗಿದ್ದು ಬಾಲಿವುಡ್​ ಚಿತ್ರರಂಗದಲ್ಲಿ ಇತಿಹಾಸ ಬರೆಯಿತು.

ಅದು 1980ರಲ್ಲಿ ತೆರೆಕಂಡ 'ಡು ಔರ್​ ಡು ಪಾಂಚ್​' ಸಿನಿಮಾ. ಇದರ ಕಥೆಯನ್ನು ಕೇಳಿಯೇ ಅಮಿತಾಭ್ ಒಪ್ಪಿರಲಿಲ್ಲ. ಆದರೆ, ಚಿತ್ರದಲ್ಲಿ ಬಿಗ್ ಬಿ ಆಪ್ತ ಸ್ನೇಹಿತ, ನಿರ್ದೇಶಕ ರಾಕೇಶ್ ಕುಮಾರ್ ಅವರು ಕಾಲಿಟ್ಟಿದ್ದೇ ತಡ ಲೆಕ್ಕಾಚಾರಗಳು ಬದಲಾಯಿತು. ರಿಜೆಕ್ಟ್​ ಮಾಡಿದ ಚಿತ್ರವನ್ನು ಮಾಡುವುದಾಗಿ ಬಚ್ಚನ್ ಒಪ್ಪಿಕೊಂಡರು. ಈ ಹಿಂದೆ ಎರಡು ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿದ್ದ ಇವರ ಜೋಡಿ, ಮತ್ತೇ ಡು ಔರ್​ ಡು ಪಾಂಚ್​ ಮೂಲಕ ಒಂದಾಗಿ, ಸಿನಿಮಾದ ದಿಕ್ಕನ್ನೇ ಬದಲಿಸಿದ್ದು ರೋಚಕ.

3 ಕೋಟಿ ಲಾಭ!

ಶಶಿಕುಮಾರ್​, ಹೇಮಾ ಮಾಲಿನಿ, ಪ್ರವೀನ್​ ಬಾಬಿ, ಅಮಿತಾಭ್ ಬಚ್ಚನ್​ ಸೇರಿ ಮುಂತಾದವರು ಅಭಿನಯದ ಈ ಚಿತ್ರಮಂದಿರದಲ್ಲಿ ಭರ್ಜರಿ ಓಪನಿಂಗ್ ಪಡೆಯಿತು. ಆದರೆ, ಮೊದಲ ವಾರದಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರಿಂದ ಸೋಲಿನ ಹಾದಿ ಹಿಡಿದಿದ್ದ ಈ ಸಿನಿಮಾ, ನಂತರದಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡು ಚಿತ್ರತಂಡವನ್ನು ಅಚ್ಚರಿಗೆ ದೂಡಿತು. ಅಂದು 1.5 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣಗೊಂಡ ಸಿನಿಮಾ, 3 ಕೋಟಿ ರೂ. ಆದಾಯವನ್ನು ಗಳಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net