ಉತ್ತಮ ಆರೋಗ್ಯಕ್ಕೆ ಅಮಿತ್ ಷಾ ಟಿಪ್ಸ್

amith shah
Published on

ನವದೆಹಲಿ: ಸರಿಯಾದ ಸಮಯದಲ್ಲಿ ಊಟ, ನೀರು ಕುಡಿಯುವುದು, ಸೂಕ್ತ ನಿದ್ರೆ ಮತ್ತು ನಿಯಮಿತ ವ್ಯಾಯಾಮದಿಂದ ನಾನು ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡುಕೊಂಡಿ ದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ. ವಿಶ್ವ ಪಿತ್ತಕೋಶ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಷಾ, ‘ಯುವಜನತೆ ಕನಿಷ್ಠ 2 ಗಂಟೆಗಳ ವ್ಯಾಯಾಮ ಮತ್ತು 6 ಗಂಟೆಗಳ ನಿದ್ದೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. 2019ರ ಬಳಿಕ ನನ್ನ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕಳೆದ ನಾಲ್ಕೂವರೆ ವರ್ಷದಿಂದ ನಾನು ಅಲೋಪಥಿ ಔಷಧವನ್ನು ಸೇವಿಸುತ್ತಿಲ್ಲ. ನನ್ನ ಆರೋಗ್ಯ ಕಾಪಾಡಿಕೊಂಡಿರುವುದರಿಂದ ನನ್ನ ಕೆಲಸ, ಆಲೋಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ವೃದ್ಧಿಸಿದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net