ಕರೊನಾ ವೈರಾಣು ಸೋಂಕಿನಿಂದ ಚೇತರಿಸಿಕೊಂಡ ಅಮಿತ್​ ಷಾ

amit shah
Published on

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಕರೊನಾ ವೈರಾಣು ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಯಾವುದೇ ಕ್ಷಣದಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದು ಎಂದು ಬಿಜೆಪಿ ಮುಖಂಡ ಮನೋಜ್​ ತಿವಾರಿ ಟ್ವೀಟ್​ ಮಾಡಿದ್ದಾರೆ.

ಅಮಿತ್​ ಷಾ ಅವರು ಆ.2ರಂದು ಕೋವಿಡ್​ ಸೋಂಕಿಗೆ ತುತ್ತಾಗಿದ್ದರು. ಆರಂಭಿಕ ಲಕ್ಷಣಗಳು ಕಂಡುಬರುತ್ತಲೇ ಅವರು ಟೆಸ್ಟ್​ ಮಾಡಿಸಿಕೊಂಡಿದ್ದು, ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹಾಗಾಗಿ, ಅವರು ದೆಹಲಿಯ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ತಮಗೆ ಸೋಂಕು ತಗುಲಿರುವುದು ಖಚಿತಪಡುತ್ತಿದ್ದಂತೆ ಟ್ವೀಟ್​ ಮಾಡಿದ್ದ ಅವರು, ಆರಂಭಿಕ ಲಕ್ಷಣಗಳು ಕಾಣಿಸುತ್ತಿದ್ದಂತೆ ಪರೀಕ್ಷೆ ಮಾಡಿಸಿಕೊಂಡೆ. ನನ್ನ ಆರೊಗ್ಯ ಚೆನ್ನಾಗಿದ್ದರೂ, ವೈದ್ಯರ ಸಲಹೆ ಮೇರೆಗೆ ನಾನು ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲರೂ ನಿಮ್ಮನ್ನು ನೀವು ಪ್ರತ್ಯೇಕಗೊಳಿಸುವ ಜತೆಗೆ ಪರೀಕ್ಷೆಯನ್ನೂ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net