ಕಾಂಗ್ರೆಸ್ ಆರೋಪಗಳಿಗೆ ಅಮಿತ್ ಷಾ ತಿರುಗೇಟು: ರಾಹುಲ್ ಗಾಂಧಿ ಯಾವಾಗಲೂ ವಿದೇಶದಲ್ಲಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ವಾಗ್ದಾಳಿ | Amit Shah

Amit Shah
Published on

ಪಾಟ್ನಾ: ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಅಮಾನ್ಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಬಿಜೆಪಿ ಮತ್ತು ಮಿತ್ರಪಕ್ಷಗಳು ಚುನಾವಣೆಯಲ್ಲಿ ಗೆದ್ದಾಗ ಮಾತ್ರ ಮತ ಕಳ್ಳತನದ ಆರೋಪಗಳನ್ನು ಮಾಡಲಾಗುತ್ತದೆ ಎಂದು ವಿಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿ ಪವರ್ ಪ್ಲೇ ಕಾರ್ಯಕ್ರಮದಲ್ಲಿ ಮಾತನಾಡಿದ ಷಾ, ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿದೇಶ ಪ್ರವಾಸಗಳಿಗೆ ಹೋಗುತ್ತರೆ. ಅದರೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಯಾವುದೇ ಆಧಾರವಿಲ್ಲದೆ ದೂರುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಳೆದ 11 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಅಮಾನ್ಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾದ ನಂತರ ಇವುಗಳಿಗೆ ಹೆಚ್ಚಿನ ಪ್ರಚೋದನೆ ಸಿಕ್ಕಿದೆ. ಆದರೆ ನನಗೆ ದೇಶದ ಜನರ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ನ್ಯಾಯಾಂಗವೂ ತಟಸ್ಥವಾಗಿದೆ. ನಮ್ಮ ವಿರೋಧ ಪಕ್ಷವು ಪ್ರತಿಯೊಂದು ಆರೋಪಕ್ಕೂ ಬೀದಿಗಿಳಿಯುತ್ತಾರೆ ಮತ್ತು ನ್ಯಾಯಾಲಯಗಳನ್ನು ಸಂಪರ್ಕಿಸುವುದಿಲ್ಲ. ಅಲ್ಲದೆ, ಸಂಸತ್ತಿನಲ್ಲಿಯೂ ಚರ್ಚೆ ಮಾಡುವುದಿಲ್ಲ ಮತ್ತು ಸಭಾತ್ಯಾಗ ಮಾಡುತ್ತಾರೆ ಎಂದು ಕೇಂದ್ರ ಸಚಿವ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮುಂದುವರೆದು ಮಾತನಾಡಿದ ಷಾ, ಪ್ರತಿಯೊಂದು ಪಕ್ಷಕ್ಕೂ ಅನುಪಾತದ ಆಧಾರದ ಮೇಲೆ ಸಮಯವನ್ನು ನೀಡಲಾಗುತ್ತದೆ ಮತ್ತು ಆ ಲೆಕ್ಕಾಚಾರದ ಆಧಾರದ ಮೇಲೆ ಕಾಂಗ್ರೆಸ್‌ಗೆ ಶೇ.10 ರಷ್ಟು ಹೆಚ್ಚಿನ ಸಮಯವನ್ನು ನೀಡಲಾಗಿದೆ. ಆದರೆ ಕಾಂಗ್ರೆಸ್‌ಗೆ ಸಮಯ ನೀಡಿದಾಗ, ರಾಹುಲ್ ಗಾಂಧಿ ವಿದೇಶದಲ್ಲಿದ್ದಾರೆ. ತದನಂತರ ಗಾಂಧಿ ಇದ್ದಕ್ಕಿದ್ದಂತೆ ಸಂಸತ್ತಿಗೆ ಹಾಜರಾಗಿ ನಾನು ಇಂದು ಮಾತನಾಡಲು ಬಯಸುತ್ತೇನೆ ಎಂದು ಹೇಳುತ್ತಾರೆ. ಸಂಸತ್ತು ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ. ಕಾಂಗ್ರೆಸ್ ಮಾತನಾಡುವ ಸರದಿ ಬಂದಾಗ, ಯಾರು ಮಾತನಾಡಬೇಕೆಂದು ರಾಹುಲ್ ಗಾಂಧಿ ನಿರ್ಧರಿಸುತ್ತಾರೆ. ಆ ಸಂಪೂರ್ಣ ಸಮಯವನ್ನು ತನಗಾಗಿ ತೆಗೆದುಕೊಳ್ಳಬಹುದು. ಆದರೆ 10 ಸಾಲುಗಳನ್ನು ಹೇಳಿದ ನಂತರ, ಅವರಿಗೆ ಸಮಸ್ಯೆಗಳಿವೆ. ಆದ್ದರಿಂದ ರಾಹುಲ್​ ಒಂದು ನೆಪವನ್ನು ಸೃಷ್ಟಿಸಿ ಹೊರನಡೆದರು ಎಂದು ರಾಹುಲ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಿರಾಕರಣೆಯ ಮನಸ್ಥಿತಿಯಲ್ಲಿದೆ ಮತ್ತು ಯಾವುದೇ ಒಳ್ಳೆಯದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇವರು ಚುನಾವಣೆಯಲ್ಲಿ ಗೆದ್ದರೆ, ಚುನಾವಣಾ ಆಯೋಗಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಮತ್ತು ಪ್ರಮಾಣ ವಚನ ಸ್ವೀಕರಿಸಲು ಆತುರಪಡುವುದಿಲ್ಲ. ವಿರೋಧ ಪಕ್ಷ ಹಿಮಾಚಲ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಏಕೆ ಪ್ರಮಾಣ ವಚನ ಸ್ವೀಕರಿಸಿದರು? ಆದರೆ ವಿಪಕ್ಷ ಸೋತರೆ, ಅದು ವಂಚನೆ ಎಂದು ಹೇಳುತ್ತಾರೆ ಎಂದು ಷಾ ಟೀಕಾಪ್ರಹಾರ ನಡೆಸಿದ್ದಾರೆ.

ದೇಶದ ಜನರು ಆರಂಭದಲ್ಲಿ ರಾಹುಲ್​ ಸ್ವಲ್ಪ ಗಂಭೀರವಾಗಿ ಪರಿಗಣಿಸಿದರು. ಆದರೆ ಈಗ ವಾಸ್ತವ ಏನೆಂದು ಜನರಿಗೆ ತಿಳಿದಿದೆ. ನಮ್ಮ ದೇಶದಲ್ಲಿ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ಬಲಿಷ್ಠವಾಗಿದೆ. ನಾವು 75 ವರ್ಷಗಳ ಹಳೆಯ ಪ್ರಜಾಪ್ರಭುತ್ವ ಮತ್ತು ಯಾರೂ ಅದರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಗೃಹ ಸಚಿವ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net