ಮಹಾರಾಷ್ಟ್ರ ಸಂಪ್ರದಾಯ ಪ್ರಕಾರ ನಡೆಯಲಿದೆ ಅಮೀರ್ ಪುತ್ರಿ ಮದುವೆ; ವಿವಾಹಪೂರ್ವ ಕಾರ್ಯಕ್ರಮದಿಂದ ಆರತಕ್ಷತೆವರೆಗೆ..ಇಲ್ಲಿದೆ ಫುಲ್​ ಡೀಟೇಲ್ಸ್​

amir
Published on

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಮನೆಯಲ್ಲಿ ಈಗ ಸಂತೋಷದ ವಾತಾವರಣ ತುಂಬಿದ್ದು, ಅಮೀರ್ ಮಗಳು ಇರಾ ಖಾನ್ ತನ್ನ ಬಹುಕಾಲದ ಗೆಳೆಯ ನುಪುರ್ ಶಿಖರೆಯೊಂದಿಗೆ ಹಸೆಮಣೆ ಏರಲಿದ್ದಾರೆ. ಈ ಜೋಡಿಯ ಪ್ರೀ ವೆಡ್ಡಿಂಗ್ ಫಂಕ್ಷನ್‌ಗಳು ಶುರುವಾಗಿದ್ದು, ಮದುವೆಗೆ ಸಂಬಂಧಿಸಿದ ಪ್ರತಿಯೊಂದು ವಿವರಗಳನ್ನು ಇಲ್ಲಿ ತಿಳಿಯೋಣ.

ಈ ವರ್ಷ ಸೆಪ್ಟೆಂಬರ್​​​​​​ನಲ್ಲಿ ಇಟಲಿಯಲ್ಲಿ ಇರಾ ಖಾನ್ ಹಾಗೂ ನೂಪುರ್ ಶಿಖರೆ ನಿಶ್ಚಿತಾರ್ಥ ನಡೆದಿತ್ತು. ಎರಡು ತಿಂಗಳ ನಂತರ, ದಂಪತಿಗಳು ನಿಶ್ಚಿತಾರ್ಥದ ಪಾರ್ಟಿಯನ್ನು ಆಯೋಜಿಸಿದರು. ಅಮೀರ್ ಅವರ ಇಡೀ ಕುಟುಂಬ ಮತ್ತು ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್, ನಟಿ ಫಾತಿಮಾ ಸನಾ ಶೇಖ್ ಸೇರಿದಂತೆ ಆಪ್ತ ಸ್ನೇಹಿತರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇರಾ ಮತ್ತು ನೂಪುರ್ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಈಗ ಅಮೀರ್ ಮಗಳು ಡೋಲಿಯಲ್ಲಿ ಕುಳಿತು ಹೋಗುವ ದಿನ ಸಮೀಪಿಸುತ್ತಿದೆ. ಇರಾ ಮತ್ತು ನೂಪುರ್ ಜನವರಿ 3 ರಂದು ಮದುವೆಯಾಗಲಿದ್ದಾರೆ.

ಆರತಕ್ಷತೆ ಯಾವಾಗ? ಅಮೀರ್ ಖಾನ್ ಅವರ ಮಗಳ ಮದುವೆಯ ಕಾರ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಸದ್ಯ ಕೆಲವು ಮೂಲದಿಂದ ಸ್ವೀಕರಿಸಲಾಗಿದೆ. ಹೊಸ ವರ್ಷವನ್ನು ಖಾನ್ ಕುಟುಂಬವು ಸಂತೋಷದಿಂದ ಪ್ರಾರಂಭಿಸಲಿದೆ. ಕಾರಣ ಇರಾ ಮತ್ತು ನೂಪುರ್ ವಿವಾಹವು ಬಾಂದ್ರಾದ ಐಷಾರಾಮಿ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ಜನವರಿ 3 ರಂದು ನಡೆಯಲಿದೆ. ನಂತರ, ಜನವರಿ 6 ಮತ್ತು 10 ರ ನಡುವೆ ಎರಡು ಆರತಕ್ಷತೆ ಪಾರ್ಟಿಗಳಿವೆ. ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಜೈಪುರದಲ್ಲಿ.

ಮದುವೆಯಲ್ಲಿ ಭಾಗವಹಿಸಲು ಮತ್ತು ದಂಪತಿಗಳನ್ನು ಆಶೀರ್ವದಿಸಲು ತುಂಬಾ ಉತ್ಸುಕರಾಗಿದ್ದಾರೆ ಅಮೀರ್. ಹೆಚ್ಚಿನ ತಾರೆಯರು ರಜೆಗಾಗಿ ಹೊರಗೆ ಹೋಗಿದ್ದಾರೆ. ಆದರೆ ಉಳಿದವರಿಗೆ ಅದು ಸ್ಟಾರ್ ಸ್ಟಡ್ ಆಗಿರುತ್ತದೆ ಎಂದು ಭರವಸೆಯಿದೆ. ಈ ಬಿಗ್ ಡೇಗೆ ಹಾಜರಾಗಲು ಸಾಧ್ಯವಾಗದವರು ಜೈಪುರದಲ್ಲಿ ಆರತಕ್ಷತೆಯ ಭಾಗವಾಗಿರುತ್ತಾರೆ. ಅಂದಹಾಗೆ ಇರಾ ಖಾನ್ ಮತ್ತು ನೂಪುರ್ ಅವರ ವಿವಾಹವು ಮಹಾರಾಷ್ಟ್ರದ ಸಂಪ್ರದಾಯಗಳ ಪ್ರಕಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net