ಮಾಜಿ ರಾಷ್ಟ್ರಪತಿ Pranab Mukherjee ಸ್ಮಾರಕ ನಿರ್ಮಿಸಲು ಅಸ್ತು ಎಂದ ಕೇಂದ್ರ ಸರ್ಕಾರ; ಪ್ರಧಾನಿ ಮೋದಿ ಅವರಿಗೆ ಅಭಾರಿ ಎಂದ ಶರ್ಮಿಷ್ಠಾ ಮುಖರ್ಜಿ

Sharmishta Mukherjee
Published on

ನವದೆಹಲಿ: ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕದ ಸ್ಥಳದ ಆಯ್ಕೆ ನಡೆಯುತ್ತಿರುವಾಗಲೇ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಣಭ್​ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಈ ಸಂಬಂಧ ಶರ್ಮಿಷ್ಠಾ ಮುಖರ್ಜಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, 2020 ಆಗಸ್ಟ್​ 31ರಂದು ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ (Pranab Mukherjee) ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್‌ಘಾಟ್‌ನ ಒಂದು ಭಾಗವಾದ ರಾಷ್ಟ್ರೀಯ ಸ್ಮೃತಿಯಲ್ಲಿ ನಿವೇಶನವನ್ನು ಸಕ್ಷಮ ಪ್ರಾಧಿಕಾರವು ಗುರುತಿಸಿ ನಿಗದಿಪಡಿಸಿದೆ ಎಂದು ತಿಳಿಸಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಶರ್ಮಿಷ್ಠಾ ಮುಖರ್ಜಿ, ಬಾಬಾ (Pranab Mukherjee) ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ನನ್ನ ಹೃದಯ ಮುಟ್ಟಿದೆ. ಈ ಸಂಬಂಧ ಪ್ರಧಾನಿ ಮೋದಿ ಖುದ್ದು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿದೆ. ವರ ಭೇಟಿ ನಿಜಕ್ಕೂ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ.

ಬಾಬಾ (Pranab Mukherjee) ಸರ್ಕಾರದ ಗೌರವವನ್ನು ಕೇಳಿ ಪಡೆಯಬಾರದು. ಅದು ಒಲಿಯಬೇಕು ಎಂದು ಬಾಬಾ ಸದಾ ಹೇಳುತ್ತಿದ್ದರು. ಆ ಕೆಲಸವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಕ್ಕೆ ನಾನು ಆಭಾರಿ. ಪ್ರಶಂಸೆ ಅಥವಾ ಟೀಕೆಗಳು ಬಾಬಾ ಅವರನ್ನು ಭಾದಿಸದು. ಆದರೆ ಸರ್ಕಾರ ಅವರನ್ನು ಗೌರವಿಸಿದ ಈ ನಿರ್ಧಾರವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶರ್ಮಿಷ್ಠಾ ಮುಖರ್ಜಿ ಪೋಸ್ಟ್​ ಮಾಡಿದ್ದಾರೆ.

https://www.vijayavani.net/hd-kumaraswamy-meets-railway-minister-ashwini-vaishnav-for-various-development-projects-i

https://www.vijayavani.net/actress-ramya-reaction-after-court-hearing

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net