

ವಾಷಿಂಗ್ಟನ್: ಅಮೆರಿಕಾದ ನ್ಯೂಯಾರ್ಕ್‌ನಲ್ಲಿ 2022ರಲ್ಲಿ ಸಲ್ಮಾನ್ ರಶ್ದಿ ಹತ್ಯೆಗೆಯಲು ಯತ್ನಿಸಿದ ನ್ಯೂಜೆರ್ಸಿಯ ಮತಾರ್(26) ನಿಷೇಧಿತ ಭಯೋತ್ಪಾದನಾ ಸಂಘಟನೆ ಹಿಜ್ಬಲ್ಲಾ ಹೆಸರಿನಲ್ಲಿ ಕೃತ್ಯ ಎಸಗಿದ್ದಾನೆ.
ರಶ್ದಿಯ 1988 ರ ಕಾದಂಬರಿ 'ದಿ ಸೈತಾನಿಕ್ ವರ್ಸಸ್' ವಿವಾದದ ನಂತರ 2022 ರಲ್ಲಿ ಮತಾರ್ ದಾಳಿ ನಡೆಸಿದ್ದು, ಅವರು ಒಂದು ಕಣ್ಣು ಕಳೆದುಕೊಂಡಿದ್ದರು.
ರಶ್ದಿ ಅವರ ಕಾದಂಬರಿ 'ದಿ ಸೈತಾನಿಕ್ ವರ್ಸಸ್' ವಿವಾದಕ್ಕೀಡಾದ ನಂತರ ಇಸ್ಲಾಮಿಕ್ ಮೂಲಭೂತವಾದಿಗಳು ಅವರ ವಿರುದ್ಧ ಫತ್ವಾ ಹೊರಡಿಸಲಾಯಿತು. ಕಾದಂಬರಿಯಲ್ಲಿ ಕುರಾನ್ ಬಗ್ಗೆ ಉಲ್ಲೇಖಿಸಿದ್ದುದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. 1989 ರಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ರುಹೊಲ್ಲಾ ಖೊಮೇನಿ ರಶ್ದಿಯನ್ನು ಕೊಲ್ಲಲು ಮುಸ್ಲಿಮರಿಗೆ ಆದೇಶ ನೀಡಿ ಫತ್ವಾ ಹೊರಡಿಸಿದ್ದರು.
ಇದಾದ ಬಳಿಕ ಮಾತರ್ ಅವರು 2022 ರಲ್ಲಿ ರಶ್ದಿಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಫತ್ವಾ ಪರಿಣಾಮ ಬೀರಿತ್ತು. ಹಿಜ್ಬುಲ್ಲಾ ಹೆಸರಿನಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಯತ್ನಿಸಿದ ಎಂದು ಈಗ ಆರೋಪ ಹೊರಿಸಲಾಗಿದೆ.
ರಶ್ದಿ ಮೇಲೆ ನಡೆದ ಹತ್ಯೆ ಯತ್ನದ ನಂತರ ದಾಳಿಕೋರನನ್ನು ಜಾಮೀನು ಇಲ್ಲದೆ ಬಂಧಿಸಲಾಗಿದೆ.