ಅಮೆರಿಕಾದ ಕರಾಳ ಕ್ಷಣ: ಚಾರ್ಲಿ ಹತ್ಯೆ ನೆನೆದು ಭಾವುಕರಾದ ಡೊನಾಲ್ಡ್​ ಟ್ರಂಪ್​! | Dark Moment

untitled-design-2025-09-11t104645015-68c25b53ebde1
Published on

Dark Moment: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಮುಖ ಸಹಾಯಕ ಚಾರ್ಲಿ ಕಿರ್ಕ್ ಹತ್ಯೆಗೆ ದುಃಖ ವ್ಯಕ್ತಪಡಿಸಿದ್ದು, ಇದು "ಅಮೆರಿಕಾದ ಕರಾಳ ಕ್ಷಣ" ಎಂದು ಬುಧವಾರ (ಸೆಪ್ಟೆಂಬರ್​ 10) ಭಾವುಕರಾಗಿದ್ದಾರೆ.

ಟ್ರಂಪ್​ ಕಳುಹಿಸಿದ ಸಂದೇಶವೊಂದರಲ್ಲಿ ಕಿರ್ಕ್​ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ನ್ಯಾಯ ಮತ್ತು ಅಮೆರಿಕನ್​ ಜನಕ್ಕಾಗಿ ಹೋರಾಡಿದಂತಹ ವ್ಯಕ್ತಿ. ಅವರು ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿದ್ದಾರೆ. ಯುವಕರಿಂದ ಅಪಾರ ಗೌರವವನ್ನು ಚಾರ್ಲಿ ಸಂಪಾದಿಸಿದ್ದರು. ಈಗ ಸ್ವರ್ಗದಲ್ಲಿ ದೇವರೊಂದಿಗೆ ಶಾಂತಿಯಲ್ಲಿದ್ದಾರೆ ಎಂಬ ನಂಬಿಕೆಯಿಂದ ನಾವು ಸಮಾಧಾನ ಪಡುತ್ತಿದ್ದೇವೆ ಎಂದು ಹೇಳಿದರು.

ಚಾರ್ಲಿ ದೇಶಾದ್ಯಂತ ಪ್ರವಾಸ ಮಾಡಿ, ಉನ್ನತ ಚರ್ಚೆಯಲ್ಲಿ ಆಸಕ್ತಿ ಹೊಂದಿದ್ದು, ಎಲ್ಲರೊಂದಿಗೆ ಸಂತೋಷದಲ್ಲಿರುವಂತಹ ವ್ಯಕ್ತಿ. ಇವರಿಗೆ ಯುವಜನರನ್ನು ರಾಜಕೀಯಕ್ಕೆ ತರುವುದು ಅವರ ಧ್ಯೇಯ ಉದ್ದೇಶವಾಗಿತ್ತು. ದೇಶದ ಮೇಲಿನ ಪ್ರೀತಿಯನ್ನು ಹಂಚಲು ಹಾಗೂ ಸಾಮಾನ್ಯ ಜ್ಞಾನದ ಸರಳ ಪದಗಳನ್ನು ಹರಡಲು ಯೋಚಿಸಿದ್ದರು. ದೇಶಾದ್ಯಂತ ತಮ್ಮ ಆಲೋಚನೆಗಳನ್ನು ಧೈರ್ಯ, ತರ್ಕ, ಹಾಸ್ಯ ಮತ್ತು ಸೊಬಗಿನಿಂದ ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿಸಿದರು.

"ಆಮೂಲಾಗ್ರ ಎಡಪಂಥೀಯ" ವಾಕ್ಚಾತುರ್ಯವು ಇಂತಹ ಧೀಮಂತ ನಾಯಕನ ಹತ್ಯೆಗೆ ಕಾರಣವಾಗಿದೆ ಎಂದು ಟ್ರಂಪ್ ಹೇಳಿದರು. ಕೆಲವು ವರ್ಷಗಳಿಂದ ಆಮೂಲಾಗ್ರ ಎಡಪಂಥೀಯರು ಚಾರ್ಲಿಯಂತಹ ಅದ್ಭುತ ಅಮೆರಿಕನ್ನರನ್ನು ವಿಶ್ವದ ಅತ್ಯಂತ ಕೆಟ್ಟ ಸಾಮೂಹಿಕ ಕೊಲೆಗಾರರು ಎಂದು ಬಣ್ಣಿಸುತ್ತಿದ್ದಾರೆ. ಈ ರೀತಿಯ ವಿಚಾರಗಳನ್ನು ನೋಡುತ್ತಿರುವುದು ಭಯೋತ್ಪಾದನೆಗೆ ನೇರ ಕಾರಣವಾಗುತ್ತದೆ ಇದು ಈ ಕೂಡಲೇ ನಿಲ್ಲಬೇಕು ಎಂದು ಹೇಳಿದರು.

ಈ ರೀತಿಯ ಕೃತ್ಯ ಮಾಡಿದಂತಹ ಅಪರಾಧಿಗಳನ್ನು ನ್ಯಾಯಕ್ಕೆ ತರುವುದಾಗಿ ಪ್ರತಿಜ್ಞೆ ಮಾಡಿದರು. ದೌರ್ಜನ್ಯ ಹಾಗೂ ಇತರ ರಾಜಕೀಯ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡಿದಂತವರನ್ನು ನನ್ನ ಆಡಳಿತ ನೋಡಿಕೊಳ್ಳುತ್ತದೆ. ಹಾಗೇ ಈ ಕೃತ್ಯಗಳಿಗೆ ರಾಜಕೀಯ ಬೆಂಬಲ, ಹಣಕಾಸಿನ ನೆರವು ಹಾಗೂ ದೇಶದ ಸುವ್ಯವಸ್ಥೆಯನ್ನು ಹಾಳು ಮಾಡಲು ಸಹಕಾರ ನೀಡುವಂತಹ ಸಂಸ್ಥೆಗಳ ಬಗ್ಗೆ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net