

ನವದೆಹಲಿ: ( American woman ) ವಿದೇಶಿ ಮಹಿಳೆಯೊಬ್ಬಳು ಭಾರತದಲ್ಲಿ ಕೆಲವೊಂದಷ್ಟು ಸೌಲಭ್ಯಗಳು ಅಮೆರಿಕದಲ್ಲೂ ಇದ್ದಿದ್ರೆ ತುಂಬಾನೇ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸುಮಾರು ನಾಲ್ಕು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಅಮೆರಿಕ ಮೂಲದ ಕ್ರಿಸ್ಟೆನ್ ಫಿಷರ್ ಎಂಬ ಮಹಿಳೆ ಭಾರತದಲ್ಲಿ ಲಭ್ಯವಿರುವ ಆಟೋದಿಂದ ಹಿಡಿದು ವೈದ್ಯಕೀಯ ಸೇವೆಯ ವರೆಗೆ 10 ಸೌಲಭ್ಯಗಳು ಅಮೆರಿಕದಲ್ಲೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಫಿಷರ್ (kristenfischer3) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕದಲ್ಲಿ ಅಪಾಯಿಂಟ್‌ಮೆಂಟ್ ಇಲ್ಲದೆ ವೈದ್ಯರನ್ನು ಸಂಪರ್ಕಿಸಲು ಸಾಧ್ಯವೇ ಇಲ್ಲ. ಭಾರತದಲ್ಲಿ ವೈದ್ಯರು ಮತ್ತು ಔಷಧಿಗಳು ಸುಲಭವಾಗಿ ಲಭ್ಯವಿದೆ. ಭಾರತದಲ್ಲಿ ಕಸ ವಿಲೇವಾರಿಗೆ ಶುಲ್ಕ ವಿಧಿಸುವುದಿಲ್ಲ, ಆದ್ರೆ ಅಮೆರಿಕಾದಲ್ಲಿ ಹಣ ಪಾವತಿಸಬೇಕಾಗುತ್ತದೆ.
ಆಟೋ ರಿಕ್ಷಾ ಅಗ್ಗದ ಮಾತ್ರವಲ್ಲದೆ ತ್ವರಿತ ಸೇವೆಯಾಗಿದೆ.ಇಲ್ಲಿ ಸಾಕಷ್ಟು ಸಸ್ಯಾಹಾರಿ ಆಹಾರ ಆಯ್ಕೆಗಳಿವೆ, ಅಮೆರಿಕದಲ್ಲಿ ಇದು ಸೀಮಿತವಾಗಿದೆ.
ಕೆಲಸಗಳಿಗೆ ಕಾರ್ಮಿಕರು ಸುಲಭವಾಗಿ ಲಭ್ಯವಿರುತ್ತಾರೆ. ಅಮೆರಿಕದಲ್ಲಿ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ದುಬಾರಿಯಾಗಿದೆ.ಡಿಜಿಟಲ್ ಐಡಿ, ಯುಪಿಐ ಪಾವತಿಯಿಂದ ಫೋನ್ ಮೂಲಕವೇ ವ್ಯವಹಾರ ಮಾಡಬಹುದು.
ಇಲ್ಲಿ ಪ್ರತಿಯೊಂದು ವಸ್ತುವಿನ MRP ನಿಗದಿಯಾಗಿದೆ, ಅಮೆರಿಕಾದಲ್ಲಿ ಸೂಪರ್ ಮಾರ್ಕೆಟ್‌ಗಳು ಈ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ. ಡೆಲಿವರಿ ಆಪ್ಲಿಕೇಶನ್‌ಗಳು ಭಾರತದಲ್ಲಿರುವ ಅತ್ಯಂತ ಅನುಕೂಲಕರ ಸೌಲಭ್ಯಗಳಲ್ಲಿ ಒಂದಾಗಿದೆ. ಇಲ್ಲಿ ಬೇಕಾದಷ್ಟು ಡೆಲಿವರಿ ಆಪ್ಲಿಕೇಶನ್‌ಗಳಿವೆ ಎಂದು ಹೀಗೆ ಸಾಕಷ್ಟು ವಿಚಾರಗಳನ್ನು ಭಾರತ ಹಾಗೂ ಅಮೆರಿಕಾವನ್ನು ಹೋಲಿಕೆ ಮಾಡಿ ಮಾತನಾಡಿದ್ದು ಮಾತ್ರವಲ್ಲದೆ ಭಾರತವನ್ನ ಹಾಡಿ ಹೋಗಳಿದ್ದಾರೆ.
ಮಾರ್ಚ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಭಾರತದಲ್ಲಿರುವ ಕೆಲವೊಂದಷ್ಟು ಸೌಲಭ್ಯಗಳು ನಮ್ಮಲ್ಲೂ ಇರ್ಬೇಕಿತ್ತು ಎಂದು ಆ ಮಹಿಳೆ ಹೇಳಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.