ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ ಆಕೆಗೆ ಏನಾಯ್ತು? ಲಸಿಕೆ ಕೊಟ್ಟ ಕೂಡಲೇ..

vaccine
Published on

ವಾಷಿಂಗ್ಟನ್​: ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ತೆರಳಿದ್ದು, ಆಕೆಗೆ ನೀಡಿದ ಚಿಕಿತ್ಸೆಯು ಅಡ್ಡಪರಿಣಾಮ ಬೀರಿದ್ದು, ಪ್ರಾಣಕ್ಕೇ ಕುತ್ತು ತಂದಿದೆ.

ಸಂತ್ರಸ್ತೆ ಅಲೆಕ್ಸಿಸ್ ವೈದ್ಯರ ನಿರ್ಲಕ್ಷ್ಯಕ್ಕೆ ಹೇಗೆ ಬಲಿಯಾದೆ ಎಂಬುದರ ಕುರಿತು ಟಿಕ್ ಟಾಕ್‌ನಲ್ಲಿ ಕೆಲವು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋಗಳಲ್ಲಿ ಆಕೆ ಅನುಭವಿಸುತ್ತಿರುವ ನೋವು ಎದ್ದು ಕಾಣುತ್ತಿದೆ. ಲಸಿಕೆ ಕೊಟ್ಟ ಕೆಲವೇ ಗಂಟೆಗಳಲ್ಲಿ ವಿರೂಪಗೊಂಡಿದ್ದರಿಂದ ತನ್ನ ಸ್ಥಿತಿ ಹೀಗಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ವೈದ್ಯರಿಂದಾಗಿಯೇ ತಮ್ಮ ಮಗು ಈ ರೀತಿಯಾಗಿದೆ ಎಂದು ಪಾಲಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆಕೆಯನ್ನು ಸಹಜ ಸ್ಥಿತಿಗೆ ತಂದು ಅಪಾಯದಿಂದ ಪಾರು ಮಾಡುವಂತೆ ಮೊರೆಯಿಡುತ್ತಿದ್ದಾರೆ.

ನಡೆದಿದ್ದಾದರೂ ಏನು?: ಅಲೆಕ್ಸಿಸ್ ಲೊರೆನ್ಜ್ ಎಂಬ 23 ವರ್ಷದ ಯುವತಿ ಪ್ಯಾರೊಕ್ಸಿಸ್ಮಲ್ ನೊಕ್ಟರ್ನಲ್ ಹಿಮೋಗ್ಲೋಬಿನ್ಯೂರಿಯಾ (ಪಿಎನ್​ಎಚ್​) ನಿಂದ ಬಳಲುತ್ತಿದ್ದು, 2024ರ ಜನವರಿಯಲ್ಲಿ ಆಕೆಯನ್ನು ಚಿಕಿತ್ಸೆಗಾಗಿ ಕ್ಯಾಲಿಫೋರ್ನಿಯಾದ ಆರೆಂಜ್‌ನಲ್ಲಿರುವ ಯುಸಿಐ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ವೈದ್ಯರು ಆಕೆಗೆ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದರು.

ಅದರ ನಂತರ, ರೋಗವನ್ನು ಕಡಿಮೆ ಮಾಡಲು ರಕ್ತ ವರ್ಗಾವಣೆಗೆ ಒಳಗಾಗಲು ಸಲಹೆ ನೀಡಲಾಗುತ್ತದೆ. ಅದಕ್ಕೆ ಅಲೆಕ್ಸಿಸ್ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ರಕ್ತ ವರ್ಗಾವಣೆಯ ನಂತರ ಆಕೆಗೆ ಸ್ವಲ್ಪ ಪರಿಹಾರ ಸಿಕ್ಕಿತಾದರೂ, ರೋಗಲಕ್ಷಣಗಳು ಸಂಪೂರ್ಣವಾಗಿ ಕಡಿಮೆಯಾಗಲಿಲ್ಲ. ರೋಗವನ್ನು ತಡೆಗಟ್ಟಲು ಲಸಿಕೆ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದರು. ಅದಕ್ಕೆ ಅಲೆಕ್ಸಿಸ್ ಒಪ್ಪಿಕೊಂಡು ಲಸಿಕೆ ಪಡೆದರು. ಲಸಿಕೆ ಹಾಕಿದ ಬಳಿಕ ಆಕೆಯ ಸ್ಥಿತಿ ಹದಗೆಟ್ಟಿತು.

ಆಕೆ ತಾತ್ಕಾಲಿಕವಾಗಿ ದೃಷ್ಟಿ ಕಳೆದುಕೊಂಡರು. ದವಡೆಯಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದರು. ವಾಂತಿ ಮತ್ತು ಭೇದಿಯೊಂದಿಗೆ ನರಳಲು ಪ್ರಾರಂಭಿಸಿದಳು. ನಂತರ ಆಕೆಯ ಹಣೆಯ ಮೇಲಿನ ಭಾಗ ಊದಿಕೊಂಡಿತ್ತು. ಆ ಪ್ರದೇಶದಲ್ಲಿ ಕಪ್ಪು ಕಲೆಗಳು ಉಂಟಾದವು. ದೇಹದ ಹಲವು ಭಾಗಗಳು ಹೀಗೆ ಬದಲಾಗಿ ಹೋದವು.

ವ್ಯಾಕ್ಸಿನ್ ಸೇಫ್ಟಿ ರಿಸರ್ಚ್ ಫೌಂಡೇಶನ್ (ವಿಎಸ್​ಆರ್​ಎಫ್​) ವರದಿಗಳ ಪ್ರಕಾರ, ಲೊರೆನ್ಜ್‌ಗೆ ಯುಸಿಐ ವೈದ್ಯಕೀಯ ಕೇಂದ್ರದಲ್ಲಿ ಟೆಟನಸ್, ನ್ಯುಮೋಕೊಕಲ್ ಮತ್ತು ಮೆನಿಂಜೈಟಿಸ್ ಲಸಿಕೆಗಳನ್ನು ನೀಡಲಾಗಿದೆ. ವ್ಯಾಕ್ಸಿನೇಷನ್ ಮಾಡಿದ ಹತ್ತು ನಿಮಿಷಗಳಲ್ಲಿ, ಆಕೆಯ ಸ್ಥಿತಿ ವೇಗವಾಗಿ ಹದಗೆಟ್ಟಿದೆ. ದುರದೃಷ್ಟವಶಾತ್ ಆಕೆಗೆ ಆರೋಗ್ಯ ವಿಮೆ ಕೂಡ ಇಲ್ಲ. ವಿಶೇಷ ಆರೈಕೆಗಾಗಿ ಅವರು ಪ್ರಸ್ತುತ ಲಾಸ್ ಏಂಜಲೀಸ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಚಾರಿಟಿಯೊಂದು ತಿಳಿಸಿದೆ.

ಸಂತ್ರಸ್ತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net