Heroic Ambulance Driver | ಮಹಿಳಾ ರೋಗಿಯ ರಕ್ಷಿಸಲು 2 ಕಿ.ಮೀ ಹೊತ್ತು ಸಾಗಿಸಿದ ಆಂಬ್ಯುಲೆನ್ಸ್ ಡ್ರೈವರ್!

Heroic Ambulance Driver
Published on

ಒಡಿಶಾ: (Heroic Ambulance Driver ) ಕೇಂದ್ರಪಾಡಾ ಜಿಲ್ಲೆಯಲ್ಲಿ  ಭಾರೀ ಮಳೆಯ ನಡುವೆ ಆಂಬ್ಯುಲೆನ್ಸ್ ಡ್ರೈವರೊಬ್ಬರು ರೋಗಿಯನ್ನು 2 ಕಿ.ಮೀ ಹೊತ್ತುಕೊಂಡು ಬಂದು ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಈತನ ಕಾರ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ದಾನಾ ಚಂಡಮಾರುತ ಒಡಿಶಾದಲ್ಲಿ ವಿನಾಶ ಸೃಷ್ಟಿಸಿತ್ತು. ಕೇಂದ್ರಪಾಡಾ ಜಿಲ್ಲೆಯ ದೂರದ ಹಳ್ಳಿಯಲ್ಲಿ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು, ಸಾರಿಗೆ ಕೊರತೆಯಿಂದಾಗಿ ಆಂಬ್ಯುಲೆನ್ಸ್ ಸಂತ್ರಸ್ತರ ಮನೆಗೆ ತಲುಪಲು ಸಾಧ್ಯವಾಗಲಿಲ್ಲ. ಆಂಬ್ಯುಲೆನ್ಸ್ ಡ್ರೈವರ್ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳೆಯ ಮನೆಗೆ ತೆರಳಿ 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಆಂಬ್ಯುಲೆನ್ಸ್‌ ಇರುವ ಕಡೆಗೆ ಹೊತ್ತೊಯ್ದಿದ್ದಾನೆ.

ಬಳಿಕ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಆದರೆ ಆಂಬ್ಯುಲೆನ್ಸ್ ಚಾಲಕನ ಮಹಾನ್ ಕಾರ್ಯಕ್ಕಾಗಿ ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಚಂಡಮಾರುತದಿಂದಾಗಿ 14 ಜಿಲ್ಲೆಗಳಲ್ಲಿ 35 ಲಕ್ಷ ಜನರು ಭಾರಿ ಪ್ರವಾಹಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದ ಸುಮಾರು 5 ಸಾವಿರದ 840 ಮನೆಗಳಿಗೆ ಹಾನಿಯಾಗಿದ್ದು ಮಾತ್ರವಲ್ಲದೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಈ ಬಾರಿ ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ನೀಡಿ ಹಂತ ಹಂತವಾಗಿ ಶಾಶ್ವತ ಮನೆ ಮಂಜೂರು ಮಾಡಲಾಗುತ್ತಿದೆ. ಪರಿಹಾರ ಶಿಬಿರದಲ್ಲಿರುವವರಿಗೆ ಅಧಿಕಾರಿಗಳು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net