ರೋಗಿಯನ್ನು ಕರೆದುಕೊಂಡು ಆಸ್ಪತ್ರೆ ಗೇಟ್ ದಾಟುತ್ತಿದ್ದಂತೆ ಕೆಟ್ಟು ನಿಂತ ಆ್ಯಂಬುಲೆನ್ಸ್​!

Ambulance
Published on

ಬಳ್ಳಾರಿ: ರೋಗಿಯನ್ನು ಕರೆದುಕೊಂಡು ಆಸ್ಪತ್ರೆ ಗೇಟ್ ದಾಟುತ್ತಿದ್ದಂತೆ ಸರ್ಕಾರಿ ಆ್ಯಂಬುಲೆನ್ಸ್ ಕೆಟ್ಟು ನಿಂತು, ರೋಗಿಯ ಸಂಬಂಧಿಕರೇ ವಾಹನ ತಳ್ಳಬೇಕಾಗಿ ಬಂದಂಥ ಪ್ರಕರಣವೊಂದು ವರದಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಇಂಥದ್ದೊಂದು ಅವ್ಯವಸ್ಥೆ ಕಂಡುಬಂದಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಕವಚದ ಆ್ಯಂಬುಲೆನ್ಸ್ ರೋಗಿಯನ್ನು ಕರೆದುಕೊಂಡು ಹೊರಟರೂ ಆಸ್ಪತ್ರೆ ದಾಟುವಷ್ಟರಲ್ಲಿ ಕೆಟ್ಟು ನಿಂತಿದೆ. ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಯಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆ ರೋಗಿಯನ್ನು ಕರೆದುಕೊಂಡು ಹೋಗಬೇಕಾದಾಗ ಈ ಸಮಸ್ಯೆ ಉಂಟಾಗಿದೆ.

ಆ್ಯಂಬುಲೆನ್ಸ್‌ ಕೆಟ್ಟು ನಿಂತು ಗಂಟೆಗೂ ಅಧಿಕ ಕಾಲ ರೋಗಿ ಹಾಗೂ ಸಂಬಂಧಿಕರು ಪರದಾಟ ನಡೆಸಬೇಕಾಗಿ ಬಂದಿತ್ತು. ಅರ್ಧ ಗಂಟೆಗೂ ಅಧಿಕ ಕಾಲ ರೋಗಿಯ ಸಂಬಂಧಿಕರು ಆ್ಯಂಬುಲೆನ್ಸ್‌ ತಳ್ಳಿದ್ದಾರೆ. ಇದರಿಂದ ಸಮಸ್ಯೆಗೆ ಒಳಗಾದ ರೋಗಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಸಿರುಗುಪ್ಪ ಆರೋಗ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರಿ ಆ್ಯಂಬುಲೆನ್ಸ್ ಒಂದೇ ತಿಂಗಳಿನಲ್ಲಿ ಐದಾರು ಬಾರಿ ಕೆಟ್ಟು ನಿಂತಿತ್ತು ಎಂಬುದು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net