ಆಂಬ್ಯುಲೆನ್ಸ್‌ನಲ್ಲಿ ಶಾಸಕಿಯ ಚೆಲ್ಲಾಟ- ರೋಗಿಗಳಿಗೆ ಪ್ರಾಣ ಸಂಕಟ!

ambulance
Published on

ಹೈದರಾಬಾದ್: ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಆರ್. ರೋಜಾ ಅಂಬ್ಯಲೆನ್ಸ್‌ನಲ್ಲಿ ಜಾಲಿ ರೈಡ್ ಮಾಡುತ್ತಾ, ಫೋಟೋಗೆ ಪೋಸ್‌ ಕೊಡುತ್ತಾ, ವಿಡಿಯೋ ಮಾಡಿಸಿಕೊಳ್ಳುತ್ತಾ ಟೈಂ ವೇಸ್ಟ್‌ ಮಾಡುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತೆಲುಗು ನಟಿಯೂ ಆಗಿರುವ ರೋಜಾ, ಆಂಬ್ಯುಲೆನ್ಸ್‌ನ ಚಾಲಕನ ಸೀಟ್‌ನಲ್ಲಿ ಕುಳಿತು ‌ಜಾಲಿಯಾಗಿ ರೌಂಡ್ ಹೊಡೆದದದ್ದು ಮಾತ್ರವಲ್ಲದೇ ತಮ್ಮ ಫೋಟೋ ಹಾಗೂ ವಿಡಿಯೋ ತೆಗೆಸಿಕೊಳ್ಳುವಲ್ಲಿ ಬಿಜಿಯಾಗಿದ್ದರು. ಇದರಿಂದಾಗಿ ಅಂಬ್ಯುಲೆನ್ಸ್‌ಗೆ ಕಾಯುತ್ತಿರುವ ರೋಗಿಗಳು ಪರದಾಡುವಂತಾಯಿತು.

ಕರೊನಾ ವೈರಸ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚಿತ್ತೂರಿನಲ್ಲಿ ಹೊಸ ಆಂಬ್ಯುಲೆನ್ಸ್‌‌ ರಸ್ತೆಗೆ ಬಿಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಂಬ್ಯುಲೆನ್ಸ್‌ನಲ್ಲಿ ಬಿಡುಗಡೆಯ ನಂತರ ಆಸ್ಪತ್ರೆಗೆ ಕಳುಹಿಸಬೇಕಿತ್ತು. ಆದರೆ ಈ ನಡುವೆಯೇ ಚಾಲಕನ ಸೀಟು ಹತ್ತಿ ಕುಳಿತ ಶಾಸಕಿ, ತನ್ನ ಬೆಂಬಲಿಗರಿಗೆ ಫೋಟೋ ಹಾಗೂ ವಿಡಿಯೋ ಮಾಡುವಂತೆ ಒತ್ತಾಯಿಸಿ ಅದಕ್ಕೆ ಪೋಸ್‌ ನೀಡುತ್ತಾ ಸಮಯ ವ್ಯರ್ಥ ಮಾಡಿದ್ದಾರೆ.

ಅಗತ್ಯ ಇರುವ ಸ್ಥಳಕ್ಕೆ ತುರ್ತಾಗಿ ಕಳುಹಿಸುವ ಬದಲು ಕೆಲವು ಗಂಟೆ ಅದರಲ್ಲಿಯೇ ಕುಳಿತು ರೋಜಾ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಆಂಬ್ಯುಲೆನ್ಸ್‌‌ ಎಮರ್ಜೆನ್ಸಿ ರೆಡಿಯೋ ಮೂಲಕ ಫೋನ್‌ ಕಾಲ್‌ ಎಟೆಂಡ್ ಮಾಡಿ ಕರೆ ಮಾಡಿದವರನ್ನು ಗೊಂದಲಕ್ಕೂ ಸಿಲುಕಿಸಿದ್ದಾರೆ.

ಕಳೆದ ವಾರ ಆಂಧ್ರಪ್ರದೇಶ ಸರ್ಕಾರ 412 ಹೊಸ ಆಂಬ್ಯುಲೆನ್ಸ್‌‌ಗಳನ್ನು ಘೋಷಿಸಿತ್ತು. ಇದರಲ್ಲಿ ನಗರಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಮೀಸಲು ಇರಿಸಲಾಗಿದೆ. ರೋಜಾ ಈ ಹಿಂದೆ ಕೂಡ ಹಲವು ಬಾರಿ ಸಾರ್ವಜನಿಕ ವಿಚಾರಗಳಿಗಾಗಿ ಪಕ್ಷದ ಹೊರಗೆ ಮತ್ತು ಒಳಗೂ ಟೀಕೆಗೊಳಗಾಗಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net