ಆಂಬುಲೆನ್ಸ್‌ನಿಂದ ಸರಣಿ ಅಪಘಾತ, ಒಬ್ಬ ಸಾವು, 6 ಜನರಿಗೆ ಗಾಯ

Accident
Published on

ಬೆಂಗಳೂರು: ಅತಿವೇಗವಾಗಿ ಬಂದ ಆಂಬುಲೆನ್ಸ್ ಚಾಲಕ ತಳ್ಳುಗಾಡಿ ತರಕಾರಿ ವ್ಯಾಪಾರಿ, ಪಾದಚಾರಿ, ಆಟೋ, ಬೈಕ್‌ಗೆ ಸರಣಿ ಅಪಘಾತ ಎಸಗಿದ್ದು, ವ್ಯಾಪಾರಿ ಸಾವನ್ನಪ್ಪಿದ್ದಾನೆ. ವಿಲ್ಸನ್ ಗಾರ್ಡನ್‌ನ ಬಿಟಿಎಸ್ ರಸ್ತೆಯ ಆರ್.ಕೆ. ದೋಸೆ ಕ್ಯಾಂಪ್ ಹೋಟೆಲ್ ಎದುರು ಘಟನೆ ಗುರುವಾರ ರಾತ್ರಿ 8.30ರಲ್ಲಿ ಘಟನೆ ಸಂಭವಿಸಿದೆ.

ಎಡಗಾಲು ಮತ್ತು ಎದೆಗೆ ಗಂಭೀರ ಗಾಯವಾಗಿ ಸಿದ್ದಾಪುರ ನಿವಾಸಿ ತಳ್ಳುಗಾಡಿ ತರಕಾರಿ ವ್ಯಾಪಾರಿ ರಮೇಶ್ (49) ಮೃತ. ಪಾದಚಾರಿಗಳಾದ ಸಿದ್ದಾಪುರದ ನಾಗರಾಜು ಎಡಗಾಲಿಗೆ, ಮಾಚೋಹಳ್ಳಿಯ ಶಿವರಾಮಸ್ವಾಮಿಗೆ ಎರಡು ಕೈಗಳಿಗೆ, ತಲೆಗೆ ಎದೆಗೆ ಮತ್ತು ಕೆ.ಎಸ್. ಗಾರ್ಡನ್‌ನ ಸ್ಕೂಟರ್ ಸವಾರ ಪ್ರವೀಣ್ ಕುಮಾರ್‌ಗೆ ಬಲಗಾಲು, ಕೆ.ಎಸ್. ಗಾರ್ಡನ್‌ನ ಬ್ರಹ್ಮಾನಂದಕುಮಾರ್ ಬಲಗಾಲಿಗೆ, ಹೊಸಕೆರೆಹಳ್ಳಿಯ ಆಟೋ ಚಾಲಕ ಪವನ್‌ಗೆ ಎಡಗೈಗೆ ಗಾಯಗಳಾಗಿವೆ. ಈ ಸಂಬಂಧ ಸಂಜೀವಿನಿ ಆಂಬುಲೆನ್ಸ್ ಚಾಲಕ ಸಿರಂಜೀನಿ (30) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದ ಆರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬುಲೆನ್ಸ್ ಚಾಲಕ ಸಿರಂಜೀನಿ, ರೋಗಿಯನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಬ್ರೇಕ್ ೇಲ್ಯೂರ್ ಆಗಿ ಅಪಘಾತವಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಬ್ರೇಕ್ ೇಲ್ಯೂರ್ ಕುರಿತು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವರದಿ ಪಡೆದ ಮೇಲೆ ನಿಜಾಂಶ ಹೊರಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net