

ಬೈಲಕುಪ್ಪೆ : ಉತ್ತಮ ಶೈಕ್ಷಣಿಕ ವ್ಯವಸ್ಥೆ ಸಾಮಾಜಿಕ ಬದಲಾವಣೆಗೆ ಉತ್ತಮ ಹಾದಿ ಎಂದು ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.
ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಪದವಿ ಪಡೆದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಹಲವು ದೇಶದ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತ ದೇಶಕ್ಕೆ ಉತ್ತಮ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಸಮಾನತೆಯನ್ನು ಕಲ್ಪಿಸುವ ಕಾನೂನನ್ನು ಜಾರಿಗೊಳಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಮಹಿಳಾ ಸಬಲೀಕರಣ, ಕಾರ್ಮಿಕರ ಹಿತಾಸಕ್ತಿ ಕಾಯ್ದೆ ಜಾರಿಗೊಳಿಸುವುದು ಮತ್ತು ಶೋಷಿತರ ಅಭಿವೃದ್ಧಿಗೆ ಪೂರಕವಾದ ಕಾಯ್ದೆಗಳನ್ನು ಜಾರಿಗೊಳಿಸಿ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಇವರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ಹುಣಸೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಕುಮಾರ್ ಮಾತನಾಡಿ, ನಾವೆಲ್ಲರೂ ಇಂದು ಸಂವಿಧಾನದಡಿಯಲ್ಲಿ ರಕ್ಷಣೆಗೆ ಒಳಪಡುತ್ತಿದ್ದೇವೆ. ಇದರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವಿರತ ಶ್ರಮ ಅಡಗಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿನ ಸ್ವಪ್ರತಿಷ್ಠೆ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜಕ್ಕಾಗಿ ಶ್ರಮಿಸಿದ ಮಹನೀಯರನ್ನು ಗೌರವ ಪೂರ್ವಕವಾಗಿ ಸ್ಮರಿಸುವುದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಅಂತಾರಾಷ್ಟ್ರೀಯ ಮಟ್ಟದ ಜಾನಪದ ಗಾಯಕ ಅಮ್ಮ ರಾಮಚಂದ್ರು, ಮರಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ವಿಶ್ವಾಸ್, ಪ್ರಾಧ್ಯಾಪಕರಾದ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯ ಚೆಲುವರಾಜ್, ಬೈಲಕುಪ್ಪೆ ಸೇರಪೋ ಮೋನಾಸ್ಟ್ರಿ, ಟೆಬೆಟಿಯನ್ ಧರ್ಮಗುರು ಟೇಶ್,ಉಪ ಪ್ರಾಂಶುಪಾಲ ಮಹದೇವ್, ಗ್ರಾಪಂ ಸದಸ್ಯ ರಾಧಾ ನಾರಾಯಣ, ರಾಜಪ್ಪ, ಪೊಲೀಸ್ ಸ್ವಾಮಿ, ದೊಡ್ಡಯ್ಯ, ಸಣ್ಣ ದೊಡ್ಡಯ್ಯ, ಶಿಕ್ಷಕರಾದ ಕುಂಟ್ಟಯ್ಯ, ಮಹದೇವ್, ಸಂಘಟನೆ ಅಧ್ಯಕ್ಷ ಮಾದೇವ, ಪಧಾಧಿಕಾರಿಗಳಾದ ಸೋಮು, ರಜನಿಕಾಂತ್, ಮಾದೇವ, ರಾಚಯ್ಯ, ಅಕ್ಕೆ ಚಂದ್ರು, ಗಣಪ,ಬಿ.ಶಿವಣ್ಣ, ಗೋಪಾಲ,ಕುಮಾರ್, ಸಣ್ಣಯ್ಯ ಸೇರಿದಂತೆ ಇತರರು ಹಾಜರಿದ್ದರು.