ಹುಕ್ಕೇರಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಲೋಕಾರ್ಪಣೆ ಸಮಾರಂಭ ಜ.25ರಂದು ಜರುಗಲಿದ್ದು, ಎಲ್ಲರೂ ಜಾತ್ಯಾತೀತವಾಗಿ ಪಾಲ್ಗೊಳ್ಳಬೇಕೆಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಾಲಯದ ಬಳಿ ಪ್ರತಿಷ್ಠಾಪಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಕಂಚಿನ ಪುತ್ಥಳಿಯನ್ನು ಬುಧವಾರ ವೀಕ್ಷಿಸಿ ಮಾತನಾಡಿದ ಅವರು, ಎಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ತತ್ತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು. ಸಮಾರಂಭಕ್ಕೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿ ಹಲವಾರು ಗಣ್ಯರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ದಲಿತ ಮುಖಂಡರಾದ ಸುರೇಶ ತಳವಾರ, ಮಲ್ಲಿಕಾರ್ಜುನ ರಾಶಿಂಗೆ ಮಾತನಾಡಿ, ಸಮಾರಂಭ ಅಭೂತಪೂರ್ವವಾಗಿ ಜರುಗಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಶಾಸಕ ನಿಖಿಲ ಕತ್ತಿ ಅವರು ಸಮಾರಂಭದ ತಯಾರಿ ಪರಿಶೀಲಿಸಿ ಸಲಹೆ-ಸೂಚನೆ ನೀಡಿದ್ದಾರೆ ಎಂದರು.
ಮುಖಂಡರಾದ ಎ.ಕೆ.ಪಾಟೀಲ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ, ಬಸವರಾಜ ಗಂಗನ್ನವರ, ಚನ್ನಪ್ಪ ಗಜಬರ, ಭಾವುಸಾಹೇಬ ಪಾಂಡ್ರೆ, ಕೆ.ವೆಂಕಟೇಶ, ಕೆಂಪಣ್ಣ ಶಿರಹಟ್ಟಿ, ಶ್ರೀಕಾಂತ ತಳವಾರ, ಶಿವಾನಂದ ಮರಿನಾಯಿಕ, ದೀಪಕ ವೀರಮುಖ, ಮಾರುತಿ ತಳವಾರ, ಲಗಮಣ್ಣ ಕಣಗಲಿ, ರೋಹಿತ ತಳವಾರ, ಕುಮಾರ ತಳವಾರ ಇತರರು ಇದ್ದರು.