ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

Ambareesh
Published on

ಬೆಂಗಳೂರು: ರಾಜಕಾರಣಿಯೂ ಆಗಿದ್ದ ನಟ ಅಂಬರೀಷ್​ ಎಲ್ಲರನ್ನೂ ಅಗಲಿ ಇಂದಿಗೆ ಭರ್ತಿ ನಾಲ್ಕು ವರುಷ. ಆದರೆ ಜೊತೆಗಿರದ ಜೀವ ಎಂದಿಗೂ ಜೀವಂತ ಅಂತ ಹಲವರು ಅಂಬರೀಷ್​ ಅವರನ್ನು ನೆನಪಿಸಿಕೊಂಡು ಅಂಬಿ ಎಂದಿಗೂ 'ಅಮರ' ಎಂದು ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಸದೆ ಹಾಗೂ ಅಂಬರೀಷ್ ಪತ್ನಿ ಸುಮಲತಾ ಕೂಡ ಪತಿ ಇಲ್ಲದ ನಾಲ್ಕು ವರ್ಷಗಳ ಕುರಿತು ತಮ್ಮ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂಬಿಯ ಪುಣ್ಯಸ್ಮರಣೆ ಮಾಡಿಕೊಂಡು ಅವರೊಂದಿಗಿನ ಒಡನಾಟವನ್ನೂ ಸ್ಮರಿಸಿಕೊಂಡಿದ್ದಾರೆ.

'ನಟನಾಗಿ ಜೊತೆಯಾಗಿ, ಬಾಳಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ ಹಿತ. ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ಅವು ಮುಂದುವರೆಯುತ್ತಿವೆ ನಿಮ್ಮದೇ ಹೆಸರಿನಲಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ. 'ಅಂಬಿ ಅಮರ' ಎಂಬುದಾಗಿ ಸುಮಲತಾ ಪುಣ್ಯಸ್ಮರಣೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net