

ಮುಂಬೈ: ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಅನಂತ್-ರಾಧಿಕಾ ಮರ್ಚೆಂಟ್ ಮದುವೆಯ ಸಂದರ್ಭದಲ್ಲಿ ರಿಲಯನ್ಸ್ ಉದ್ಯೋಗಿಗಳಿಗೆ ಅಂಬಾನಿ ಕುಟುಂಬ ಉಡುಗೊರೆಗಳನ್ನು ನೀಡಿದೆ.
ಇದನ್ನೂ ಓದಿ: ಬನಾರಸ್ ಸೀರೆ ಧರಿಸಿ ಬೆರಗುಗೊಳಿಸಿದ ನೀತಾ ಅಂಬಾನಿ
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಜೋಡಿ ಶುಕ್ರವಾರ(ಜು.12)ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಂಬಾನಿ ಕುಟುಂಬ ಉದ್ಯೋಗಿಗಳನ್ನು ತಮ್ಮ ಕುಟುಂಬದ ಭಾಗವೆಂದು ಪರಿಗಣಿಸಿದ್ದು, ಅವರಿಗೆ ವಿಶೇಷವಾದ ಉಡುಗೊರೆಗಳನ್ನು ಕಳುಹಿಸಿದರು.
ಕೆಂಪು ಪೆಟ್ಟಿಗೆಯಲ್ಲಿ ನವವಿವಾಹಿತರ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ಬರೆಯಲಾಗಿದೆ. ಅದರಲ್ಲಿ ನಾಲ್ಕು ಬಗೆಯ ತಿನಿಸುಗಳಿವೆ. ಆಲೂ ಭುಜಿಯಾ, ಸೇವ್ , ಚಿದ್ವಾ ಜೊತೆಗೆ ಬೆಳ್ಳಿ ನಾಣ್ಯವನ್ನು ರಿಲಯನ್ಸ್ ಉದ್ಯೋಗಿಗಳಿಗೆ ನೀಡಲಾಯಿತು. ಕೆಲವು ಉದ್ಯೋಗಿಗಳು ತಮ್ಮ ಉದ್ಯೋಗದಾತರು ಕಳುಹಿಸಿದ ಉಡುಗೊರೆಗಳನ್ನು ಹಂಚಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಅಂಬಾನಿ ಕುಟುಂಬ ಇತ್ತೀಚೆಗೆ ಕೆಲವು ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಿದ್ದು ಗೊತ್ತೇ ಇದೆ. ಅವರು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಜನರಿಗೆ ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ದೃಶ್ಯಗಳು ವೈರಲ್ ಆಗಿವೆ.