ರೈತರು, ಸೈನಿಕರನ್ನು ಸದಾ ಸ್ಮರಿಸಿ

sor naati
ಯುವಕರಲ್ಲಿ ಕೃಷಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಹಿರೇಶಕುನ ಗ್ರಾಮದ ಕುಣಜಿಬೈಲ್‌ನಲ್ಲಿ ಹಮ್ಮಿಕೊಂಡಿದ್ದ ಭತ್ತ ನಾಟಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ರೈತರು. ಸಂಪತ್‌ಕುಮಾರ್, ಶಿವಪ್ಪ, ಪ್ರೇಮಾ, ಜ್ಯೋತಿ, ಭಾಗ್ಯಾ ಇತರರಿದ್ದರು.
Published on

ಸೊರಬ: ಸಮಾಜದಲ್ಲಿ ರೈತರು ಹಾಗೂ ಸೈನಿಕರನ್ನು ಗೌರವದಿಂದ ಕಾಣುವ ಜತೆಗೆ ಅವರನ್ನು ಸ್ಮರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಹಿರೇಶಕುನ ಗ್ರಾಮದ ಕುಣಜಿಬೈಲ್‌ನಲ್ಲಿ ಏರ್ಪಡಿಸಿದ್ದ ನಾಟಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಧರು ನಮ್ಮ ರಕ್ಷಣೆಗೆ ಗಡಿ ಕಾಯುತ್ತಿದ್ದಾರೆ. ಅಂಥವರನ್ನು ಗೌರದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ. ರೈತರ ಮುಂದೆ ಅನೇಕ ಸವಾಲುಗಳಿವೆ. ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಆಧುನಿಕ ಕೃಷಿ ಪದ್ಧತಿಯತ್ತ ಮುಖ ಮಾಡಬೇಕಿದೆ ಎಂದು ತಿಳಿಸಿದರು.

ಸಮಾಜ ಸೇವಕ ರಾಜು ಹಿರಿಯಾವಲಿ ಮಾತನಾಡಿ, ದೇಶದಲ್ಲಿ ಅನ್ನ ನೀಡುವ ಶಕ್ತಿ ರೈತನಿಗೆ ಇದೆಯೇ ಹೊರತು ಇನ್ಯಾರಿಗೂ ಇಲ್ಲ. ಸರ್ಕಾರ ರೈತರಿಗಾಗಿ ಹಲವು ಯೋಜನೆ ನೀಡಲು ಕ್ರಮ ಕೈಗೊಳ್ಳಬೇಕಿದೆ. ಪ್ರತಿ ಕ್ಷೇತ್ರಕ್ಕೆ ಸಬ್ಸಿಡಿ ಯೋಜನೆ ಜಾರಿ ಮಾಡಬೇಕು ಎಂದರು.

ನಿವೃತ್ತ ಶಿಕ್ಷಕ ಸಂಪತ್‌ಕುಮಾರ್, ರೈತ ಶಿವಪ್ಪ, ವೇದಿಕೆ ಕಾರ್ಯದರ್ಶಿ ಮಹೇಶ್ ಖಾರ್ವಿ, ಮಧು, ರೈತ ಮಹಿಳೆಯರಾದ ಪ್ರೇಮಾ, ಜ್ಯೋತಿ, ಭಾಗ್ಯಾ, ಸವಿತಾ, ದ್ರಾಕ್ಷಾಯಿಣಿ, ರೇಣುಕಾ, ಗೀತಾ, ಲಕ್ಷ್ಮಮ್ಮ, ಪ್ರೇಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net