

ನಾಲತವಾಡ: ಆಲೂರು ಆಂಜನೇಯ ಜಾತ್ರೆ ಏ.18 ರಿಂದ 21ರ ವರೆಗೆ ವೈಭವದಿಂದ ಜರುಗಲಿದೆ. 18ರಂದು
ಸಂಜೆ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ, ಮನಗೂಳಿಯ ಸೋಮೇಶ್ವರ ಭಜನಾ ಮಂಡಳಿ ಕಲಾವಿದರಿಂದ ಆಕಾಶ ಮನಗೂಳಿ ನೇತೃತ್ವದಲ್ಲಿ ಜಾನಪದ ಗೀತೆಗಳು, ಭಕ್ತೀಗಿತೆಗಳ ಗಾಯನ, ನಾಗಠಾಣದ ವಿಜಯಲಲಕ್ಷಿ$್ಮ ಭಜನಾ ಮಂಡಳಿಯಿಂದ ಸುರೇಶ ಬಡಿಗೇರ ನೇತೃತ್ವ್ವದಲ್ಲಿ ಗಾಯನ ಹಾಗೂ
ರಾಜ್ಯದ ವಿವಿಧ ಭಾಗಗಳ ಕಲಾವಿದರಿಂದ ಶಿವ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
19 ಬೆಳಗ್ಗೆ 9ಕ್ಕೆ ಆಂಜನೇಯನಿಗೆ ಮಹಾರುದ್ರಾಭಿಷೇಕ, ಸಂಜೆ 4ಕ್ಕೆ ಕಳಸ ಆಗಮನ, 4.30ಕ್ಕೆ ಕೆಸಾಪುರ ದೇಶಮುಖ ರನ್ನು ಹಾಗೂ ಬಾಬುದಾರರನ್ನು ಸಕಲ ವಾದ್ಯ ವೈಭವಗಳೊಂದಿಗೆ ಬರಮಾಡಿಕೊಳ್ಳುವುದು, 5.30ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. ನಂತರ ಹಾಲು ಕೊಂಡ ತುಳುಕಿಸುವುದು, ರಾತ್ರಿ10ಕ್ಕೆ ತಾಯಿಯ ಋಣ ಮಣ್ಣಿನ ಗುಣ ನಾಟಕ ಪ್ರದರ್ಶನಗೊಳ್ಳುವುದು. 18ರಂದು ಮತ್ತು 19ರಂದು ಶ್ರಿಶೈಲ ಪಾದಯಾತ್ರೆ ಸಮಿತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಜಾತ್ರೆ ನಿಮಿತ್ತ ಹಮ್ಮಿಕೊಮಡಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಗಳಿಸಿದ ತಂಡಗಳಿಗೆ ಏ.20ರಂದು ಬಹುಮಾನ ವಿತರಿಸಲಾಗುವುದು. ಸಂಜೆ 5ಕ್ಕೆೆ ಆಲೂರ ಹಾಗೂ ಕೆಸಾಪುರ ಗ್ರಾಮಸ್ಥರ ಸಮ್ಮುಖದಲ್ಲಿ ಹಾಲು ಕೊಂಡ ತುಳುಕಿಸುವುದು. ರಾತ್ರಿ10ಕ್ಕೆೆ ಕಿರುತೆರೆ ಹಾಸ್ಯ ಕಲಾವಿದ ಶ್ರಿಶೈಲ ಹೂಗಾರ ನೇತೃತ್ವ್ವದಲ್ಲಿ ಇಂಚರ ಮೆಲೋಡಿಸ್ ಕಲಾತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡಿಯಲಿದೆ.
21ರಂದು ಬೆಳಗ್ಗೆ 8ಕ್ಕೆ ಕಡುಬಿನ ಕಾಳಗದ ನಂತರ ಬಾಬುದಾರರ ಮನೆಗೆ ಕಳಸ ಕಳಿಸುವುದು. ರಾತ್ರಿ 9ಕ್ಕ್ಕೆ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ ಜರುಗಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.