ಕರ್ತವ್ಯದ ಜತೆಗೆ ಮಾನವೀಯತೆ ಮುಖ್ಯ

sor programme
ಸೊರಬದಲ್ಲಿ ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಎಂ.ಆರ್.ಗಿರೀಶ್, ಮಂಜುನಾಥ್, ಉಮೇಶ್, ಬಿ.ಆರ್.ಭಾಸ್ಕರ್ ಇತರರಿದ್ದರು.
Published on

ಸೊರಬ: ಪ್ರತಿಯೊಬ್ಬ ವ್ಯಕ್ತಿಯು ಕರ್ತವ್ಯದ ಜತೆಗೆ ಮಾನವೀಯತೆ ಹೊಂದಿದಾಗ ಸಮಾಜದಲ್ಲಿ ಗಳಿಸಿದ ಹೆಸರು ಉಳಿಸಿಕೊಳ್ಳಲು ಸಾಧ್ಯ ಎಂದು ಸಾಗರ ತಾಯಿ-ಮಕ್ಕಳ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನಾಗೇಂದ್ರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯಕೀಯ ವೃತ್ತಿಯಲ್ಲಿ ನಿಷ್ಠೆ, ತಾಳ್ಮೆ, ಸಹನೆ ಮುಖ್ಯ. ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ಬದುಕಿನುದ್ದಕ್ಕೂ ಕಾರ್ಯತತ್ಪರತೆ ಮೈಗೂಡಿಸಿಕೊಳ್ಳಬೇಕು. ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉದ್ಯೋಗ ಪಡೆದು ಪಾಲಕರ ಆಸೆ, ಆಕಾಂಕ್ಷೆ ಈಡೇರಿಸಬೇಕು. ನಮ್ಮ ಸಾಧನೆಗಳ ಹಿಂದೆ ಗುರುವಿನ ಪಾತ್ರ ಮುಖ್ಯ. ಅವರನ್ನು ಸನ್ಮಾನಿಸುವ ಭಾಗ್ಯ ದೊರೆತಿದ್ದು ಸಂತಸ ನೀಡಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಸಿಪಿಐ ಎಲ್.ರಾಜಶೇಖರ್, ಪರಿಶ್ರಮ, ಸಮಯ ಪ್ರಜ್ಞೆ, ಉತ್ತಮ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಶಿರಾಳಕೊಪ್ಪದ ಉದ್ಯಮಿ ಎಂ.ಆರ್.ಗಿರೀಶ್, ಪ್ರಾಚಾರ್ಯ ಮಂಜುನಾಥ್, ಶಿಕ್ಷಕ ಉಮೇಶ್, ನಿವೃತ್ತ ಶಿಕ್ಷಕರಾದ ಬಿ.ಆರ್.ಭಾಸ್ಕರ್, ಎನ್.ಕೆ.ಶಿವಶಂಕರ್ ಆಚಾರಿ, ನಿವೃತ್ತ ಸೈನಿಕ ಎಂ.ಎಚ್.ಸದಾಶಿವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net