ಅಲ್ಲು ಅರ್ಜುನ್​ ಅಭಿನಯದ ಪುಷ್ಪ-2 ಮರು ಬಿಡುಗಡೆ: ಕಾರಣ ಹೀಗಿದೆ | Pushap-2

dk (76) (1)
Published on

ಹೈದರಾಬಾದ್​: ಅಲ್ಲು ಅರ್ಜುನ್​ ಅಭಿನಯದ ಪುಷ್ಪ-2 ಚಿತ್ರ 2025ರ ಡಿ.10ಕ್ಕೆ ಬಿಡುಗಡೆಯಾಗಿದ್ದು, ವಿಶ್ವಾದ್ಯಂತ ಸಂಚಲ ಮೂಡಿಸುವ ಮೂಲಕ ಬಿಗ್​ ಹಿಟ್​ ಆಗಿದೆ. ಅಲ್ಲದೆ, ಬಾಕ್ಸ್​ ಆಫಿಸ್​​ನಲ್ಲಿ  ಅಂದಾಜು 1,500 ಕೋಟಿ ರೂ. ವಸೂಲಿ​ ಮಾಡಿದೆ. ಇದೀಗ ಇದೇ ಜ.17ರಂದು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳದೆ ಎಂದು ಚಿತ್ರತಂಡ ಹೇಳಿದೆ.

ಹೌದು, ಇದಾಗಲೇ ಬಿಡುಗಡೆಗೊಂಡು ಭರ್ಜರಿ ಹಿಟ್​ ಆಗಿರು ಪುಷ್ಪ-2 ಭಾರಿ ಸದ್ದು ಮಾಡುತ್ತಿದೆ. ಇನ್ನು ಕೆಲ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಓಡುತ್ತಿದೆ. ಆದರೆ, ಚಿತ್ರತಂಡ ಮಾತ್ರ ಈ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರೀ-ರೀಲಿಸ್ ಮಾಡಲಿದ್ದೇವೆ ಎಂದು ಅನೌನ್ಸ್​​ ಮಾಡಿದೆ. ಏನಿದರ ಉದ್ದೇಶ ಎಂದು ತಿಳಿಯೋಣ ಬನ್ನಿ..

ಮರು ಬಿಡುಗಡೆಗೆ ಕಾರಣ ಹೀಗಿದೆ

ಚೀತ್ರಿಕರಣ ಸಮಯದಲ್ಲಿ ಕೈಬಿಟ್ಟಿದ್ದ ಕೆಲ ವಿಶೇಷ ಗ್ಲಿಂಪ್ಸ್​(ಚಿತ್ರದ ತುಣುಕು)ಗಳು ಇದ್ದು, ಇದೀಗ ಸಿನಿಮಾದಲ್ಲಿ ಮುಂದುವರೆಸುತ್ತೇವೆ. ಅಂದರೆ ತುಣುಕುಗಳನ್ನು ಸೇರಿಸಿ ಒಟ್ಟು 20 ನಿಮಿಷ ದೃಶ್ಯಗಳನ್ನು ಸೇರಿಸುವ ಮೂಲಕ ಸಿನಿಮಾ ಇನಷ್ಟು ಚಿತ್ರ ಹಿಗ್ಗಲಿದೆ. ಇಂತಹ ಅದ್ಭತ ಚಿತ್ರಗಳನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಿ ಎಂದು ಸಿನಿಮಾ ತಂಡ ಅಭಿಮಾನಿಗಳಿಗೆ ಹೇಳಿದೆ. ಅಲ್ಲದೆ, ಇದಕ್ಕೆ ಕಾರಣ ಇದೇ 17ರಂದು ಚಿತ್ರ ನಿರ್ದೇಶಕ ಸುಕುಮಾರ್ ಅವರ ಜನ್ಮದಿನ ಇದ್ದು, ಇದರ ಪ್ರಯುಕ್ತ ಸಿನಿಮಾವನ್ನು ಮತ್ತೊಮ್ಮೆ ಬಿಡುಗಡೆಗೊಳಿಸಲಿದ್ದೇವೆ ಎಂದು ಚಿತ್ರತಂಡ ಮಾಹಿತಿ ನೀಡಿದ್ದಾರೆ.

ಸುಕುಮಾರ್ ನಿರ್ದೇಶನದ, ಪುಷ್ಪ 2 ದಿ ರೂಲ್ ಪ್ರಮುಖ ಪಾತ್ರಗಳಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಧನುಂಜಯ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಅಜಯ್ ಘೋಷ್ ಸೇರಿದಂತೆ ತಾರಾಗಣವನ್ನು ಒಳಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net