

ಆಂಧ್ರಪ್ರದೇಶ: ಇದೇ ಡಿ.05ರಂದು ಸೌತ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ-2 ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಐದು ಭಾಷೆಗಳಲ್ಲಿ ತೆರೆಕಾಣಲಿರುವ ಈ ಸಿನಿಮಾಗಾಗಿ ದೇಶಾದ್ಯಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಅಲ್ಲದೆ. ಆಂಧ್ರಪ್ರದೇಶಲ್ಲಿ ಬಿಟ್ಟು ಉಳಿದ ರಾಜ್ಯಗಳಲ್ಲಿ ಸಿನಿಮಾದ ಟಿಕೇಟ್ ದರ ಹೆಚ್ಚಳವಾಗಿದ್ದರಿಂದ ಸಿನಿಮಾ ಟೀಕೆಗೆ ಗುರಿಯಾಗಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರವೇ ಅನುಮೋದನೆ ಕೊಟ್ಟಿದೆ. ಹೀಗಾಗಿ, ಇಂತಹ ನಿರ್ಧಾರ ಕೈಗೊಂಡಿರುವ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡುರವ ಅಲ್ಲು ಅರ್ಜುನ್, ''ಟಿಕೆಟ್ ದರದ ಹೆಚ್ಚಳವನ್ನು ಅನುಮೋದಿಸಿದ್ದಕ್ಕಾಗಿ ಆಂಧ್ರಪ್ರದೇಶದ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಪ್ರಗತಿಪರ ನಿರ್ಧಾರವು ತೆಲುಗು ಚಿತ್ರರಂಗದ ಬೆಳವಣಿಗೆ ಮತ್ತು ಏಳಿಗೆಗೆ ನಿಮ್ಮ ಆಚಲ ಬದ್ಧತೆ ಇದು ತೋರಿಸುತ್ತದೆ. ಗೌರವನ್ವಿತ ಆಂಧ್ರಪ್ರದೇಶ ಸಿಎಂ ಚಂದ್ರಬಾಬುಗಾರು ಅವರು ದೂರದೃಷ್ಠಿ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡಿದ್ದಕ್ಕಾಗಿ ವಿಶೇಷ ಧನ್ಯವಾದಗಳು ಎಂದಿರುವ ಅವರು, ಚಲಚಿತ್ರೋದ್ಯಮವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಧನ್ಯವಾದಗಳು'' ಎಂದು ಹೇಳಿದ್ದಾರೆ.
ಸಿಂಗಲ್ ಸ್ಕ್ರೀನ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪುಷ್ಪ-2 ಆರು ಪ್ರದರ್ಶನಗೊಳ್ಳಲು ಸರ್ಕಾರ ಅನುಮತಿ ಕೊಟ್ಟಿದೆ. ಇದರ ಬೆಲೆ ಕ್ರಮವಾಗಿ 324.50 ರೂ. ಮತ್ತು 413 ರೂ ಆಗಿರುತ್ತದೆ. ಮುಂದಿನ 15 ದಿನಗಳ ವರೆಗೆ ಇದೇ ದರದಲ್ಲಿ ಮುಂದುವರೆಸಬೇಕು ಎಂದು ಸರ್ಕಾರದ ಆದೇಶದಲ್ಲಿದೆ.
ವರದಿ ಪ್ರಕಾರ, ಡಿ.4ರಂದು ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಆ ಪ್ರಿಮಿಯರ್ ಶೋಗಳ ಟಿಕೆಟ್ ದರಗಳು ಸಿಂಗಲ್ ಸ್ಕ್ರೀನ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ 944 ರೂ. ದರ ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕರ್ನಾಟಕದಲ್ಲಿ ಕೂಡ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದು ಸೊಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅಲ್ಲದೇ. ತೆಲಂಗಾಣದಲ್ಲಿ ಕೂಡ ಟಿಕೆಟ್ ದರ ಅಧಿಕವಾಗಿದ್ದರಿಂದ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದೇ ಡಿ.3ರಂದು ಅರ್ಜಿ ವಿಚಾರಣೆ ನಡೆಯಲಿದೆ,(ಏಜೆನ್ಸೀಸ್).