

ಬೆಂಗಳೂರು: ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಾಪ್ಟರ್- 1(Kantara Chapter 1) ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದ್ದು, ವಿಶ್ವದ್ಯಾಂತ ಸಂಚಲನ ಮೂಡಿಸಿದೆ. ಇದೀಗ ಸ್ಟೈಲಿಸ್ಟಾರ್(Stylish Star) ಅಲ್ಲು ಅರ್ಜುನ್ ರಿಷಬ್ರ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.
ಕಾಂತಾರ ಸಿನಿಮಾಗೆ ಸಂಬಂಧಿಸಿದಂತೆ ತಮ್ಮ 'X' ಖಾತೆಯಲ್ಲಿ ಅಲ್ಲು ಅರ್ಜುನ್ 'ಕಾಂತಾರ' ಚಿತ್ರದ ಪೋಸ್ಟರ್ ಜತೆಗೆ ಒಂದು ವಿಸ್ತೃತ ಟಿಪ್ಪಣಿ ಬರೆದಿದ್ದಾರೆ.
"ನಿನ್ನೆ ರಾತ್ರಿ #ಕಾಂತಾರ ನೋಡಿದೆ. ವಾಹ್, ಎಂತಹ ಅದ್ಭುತ ಚಿತ್ರ. ನಾನು ಅದನ್ನು ನೋಡುತ್ತಾ ಒಂದು ಭಾವೋದ್ವೇಗದಲ್ಲಿದ್ದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ ಏಕವ್ಯಕ್ತಿ ಪ್ರದರ್ಶನಕ್ಕಾಗಿ @shetty_rishab ಅವರಿಗೆ ಧನ್ಯವಾದಗಳು. ಅವರು ಪ್ರತಿಯೊಂದು ಕಲೆಯಲ್ಲೂ ಉತ್ತಮ ಸಾಧನೆ ಮಾಡಿದರು." ಎಂದಿದ್ದಾರೆ.
ನಟನೆ, ನಿರ್ದೇಶನ ಮತ್ತು ಇನ್ನೂ ಅನೇಕ ಪಾತ್ರಗಳನ್ನು ವಹಿಸಿಕೊಂಡಿದ್ದಕ್ಕಾಗಿ ಅವರು ರಿಷಬ್ ಅವರನ್ನು ಅಲ್ಲು ಅರ್ಜುನ್ ಶ್ಲಾಘಿಸಿದರು.
ಇಡೀ @hombalefilms ತಂಡಕ್ಕೆ ಅಭಿನಂದನೆಗಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಅನುಭವವನ್ನು ವಿವರಿಸಲು ಪದಗಳೇ ಸಾಲದು. ಬಹಳಷ್ಟು ಪ್ರೀತಿ, ಮೆಚ್ಚುಗೆ ಮತ್ತು ಗೌರವ" ಎಂದಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಭಾಷಾ ಅಡೆತಡೆಗಳನ್ನು ದಾಟಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದೆ.(ಏಜೆನ್ಸೀಸ್)