PHOTOS | ಮಗಳೊಟ್ಟಿಗೆ ಧ್ವಜರೋಹಣ ಮಾಡಿದ ಸ್ಟೈಲಿಶ್​ ಸ್ಟಾರ್​; ಇಲ್ಲಿವೆ ನೋಡಿ ಫೋಟೋಸ್​

Untitled design - 2023-08-15T152617.592
Published on

ಆಂಧ್ರಪ್ರದೇಶ: ಇಂದು ದೇಶಾದ್ಯಂತ ಭಾರತೀಯರು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಟಾಲಿವುಡ್​​ನ ಸ್ಟೈಲಿಶ್​ ಸ್ಟಾರ್, ನಟ ಅಲ್ಲು ಅರ್ಜುನ್ ಕೂಡ​ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಮಗಳು ಆರ್ಹಾ ಮತ್ತು ಸಿಬ್ಬಂದಿಗಳೊಟ್ಟಿಗೆ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಧ್ವಜರೋಹಣ ಮಾಡಿ, ಸೆಲ್ಯೂಟ್​ ಮಾಡಿದ ಅಲ್ಲು ಅರ್ಜುನ್, ಮಗಳು ಅರ್ಹಾ ಮತ್ತು ತಂಡದ ಇತರ ಸದಸ್ಯರೊಂದಿಗೆ ಬಿಳಿ ಚಿಕಂಕರಿ ಕುರ್ತಾ ಸೆಟ್‌ನಲ್ಲಿ 'ಸ್ಟೈಲಿಶ್' ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣ ಶಾಂತಿಯ ಸಂಕೇತವಾದ ಕಾರಣ ವೈಟ್​ ಬಣ್ಣದ ಉಡುಗೆಯನ್ನು ತೊಟ್ಟಿದ್ದಾರೆ.

ದೇಶ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮದೇ ವಿಶೇಷ ಫ್ಯಾನ್​ ಫಾಲೋಯಿಂಗ್​ ಹೊಂದಿರುವ ಅಲ್ಲು ಅರ್ಜುನ್​ ಅವರ ಫೋಟೋ ಮತ್ತು ವಿಡಿಯೋ ನೋಡಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net