'ಪುಷ್ಪಾ'ಗೆ ಅಲ್ಲು ಅರ್ಜುನ್, ರಶ್ಮಿಕಾ ಮತ್ತು ಫಹದ್ ಮೊದಲ ಆಯ್ಕೆಯಾಗಿರಲಿಲ್ಲ, ನಿರ್ದೇಶಕರು ಬೇರೆ ನಟರ ಮೊರೆ ಹೋಗಿದ್ದರು..! | Pushpa 2

pushpa final
Published on

ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ನಟನೆಯ ಪುಷ್ಪ-2 ನಿನ್ನೆ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಸೂಪರ್‌ಹಿಟ್ ಸಿನಿಮಾವು 2021ರ ʼಪುಷ್ಪಾ: ದಿ ರೈಸ್ʼ ಚಿತ್ರದ ಮುಂದಿನ ಭಾಗವಾಗಿದ್ದು, ಡಿಸೆಂಬರ್ 4ರಂದು ಹೈದರಾಬಾದ್‌ನಲ್ಲಿ ಮತ್ತು ಡಿಸೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಹೆಚ್ಚಿನ ಕ್ರೇಜ್​ ಹುಟ್ಟಿಸಿದ್ದ ಸಿನಿಮಾ ಇದೀಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ 'ಪುಷ್ಪಾ'ಗೆ ಮೊದಲ ಆಯ್ಕೆಯಾಗಿರಲಿಲ್ಲ. ಹೌದು! ಶಾಕ್ ಎನಿಸಿದರೂ ನಿರ್ದೇಶಕ ಸುಕುಮಾರ್ ಪ್ರಿ-ಪ್ರೊಡಕ್ಷನ್ ಸಮಯದಲ್ಲಿ ಈ ಸೂಪರ್ ಸ್ಟಾರ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ.ಕನ್ನಡ ಸೇರಿದಂತೆ ಆರು ಭಾಷೆಗಳ ಸುಮಾರು 12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಚಿತ್ರದ ನಿರ್ದೇಶಕ ಸುಕುಮಾರ್ ಅವರ ಮೊದಲ ಆಯ್ಕೆ ಅಲ್ಲು ಅರ್ಜುನ್ ಆಗಿರಲಿಲ್ಲ. ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪಾತ್ರಗಳಿಗೂ ಸಹ ನಿರ್ದೇಶಕರು ಮೊದಲು ಬೇರೆ ನಟ-ನಟಿಯರನ್ನು ಆಯ್ಕೆ ಮಾಡಿದ್ದರಂತೆ.

'ಪುಷ್ಪ: ದಿ ರೈಸ್' ನಿರ್ದೇಶಕ ಸುಕುಮಾರ್ ಅವರು ಮಹೇಶ್ ಬಾಬುರನ್ನು ಪ್ರಮುಖ ಪಾತ್ರ 'ಪುಷ್ಪರಾಜ್'ಗೆ ಆಯ್ಕೆ ಮಾಡಲು ಬಯಸಿದ್ದರಂತೆ. ಆದರೆ ಮಹೇಶ್ ಬಾಬು ಈ ಪಾತ್ರದಲ್ಲಿ ನಟಿಸಲು ಹಿಂಜರಿದು ಚಿತ್ರದಿಂದ ಹಿಂದೆ ಸರಿದರಂತೆ. ಮಹೇಶ್ ಬಾಬು ಚಿತ್ರ ಮಾಡಲು ನಿರಾಕರಿಸಿದಾಗ, ಅಲ್ಲು ಅರ್ಜುನ್ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಇದಕ್ಕೆ ಓಕೆ ಎಂದ ಅಲ್ಲು ಅರ್ಜುನ್‌ ಅದ್ಭುತವಾಗಿ ನಟಿಸುವ ಮೂಲಕ ಸಿನಿಮಾ ಸೂಪರ್‌ ಹಿಟ್‌ ಆಗುವಂತೆ ಮಾಡಿದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯು ಅರಸಿ ಬಂತು.

'ಊ ಅಂಟಾವಾ ಮಾವ.. ಊಊ ಅಂಟಾವಾ ಮಾವ..!ʼ ಎಂದು ಭರ್ಜರಿ ಡ್ಯಾನ್ಸ್‌ ಮಾಡಿದ ಸಮಂತಾ ರುತ್ ಪ್ರಭು ಅವರಿಗೆ ʼಶ್ರೀವಲ್ಲಿʼ ಪಾತ್ರಕ್ಕೆ ಆಫರ್‌ ನೀಡಲಾಗಿತ್ತು. ಆದರೆ ಈ ಪಾತ್ರವನ್ನು ಅವರು ನಿರಾಕರಿಸಿದ್ದರು.‘ರಂಗಸ್ಥಳಂ’ ನಂತರ ತೆರೆಮೇಲೆ ಗ್ರಾಮೀಣ ಹುಡುಗಿಯ ಪಾತ್ರ ಮಾಡಲು ಸಮಂತಾರಿಗೆ ಇಷ್ಟವಿರಲಿಲ್ಲವಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net