ಲಾಕ್​ಡೌನ್ ಮಧ್ಯೆಯೂ ವಾಕಿಂಗ್​​ಗೆ ಮುದ್ದು ನಾಯಿಯನ್ನು ಕರೆದೊಯ್ಯಬಹುದು.....

Pet Dog
Published on

ಮುಂಬೈ: ಪ್ರಾಣಿ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ.. ! ಇನ್ನು ಮುಂದೆ ನೀವು ನಿಮ್ಮ ಮುದ್ದು ನಾಯಿಯನ್ನು ವಾಕ್​​ಗೆ ಕರೆದುಕೊಂಡು ಹೋಗಬಹುದು...! ಸಾಕು ನಾಯಿಯನ್ನು ದೈನಂದಿನ ವಾಕ್​ ಗೆ ಕರೆದೊಯ್ಯಲು ಅವಕಾಶ ನೀಡುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ರಾಜ್ಯಗಳಿಗೆ ಸೂಚಿಸಿದೆ.

ಜೂನ್ 1 ರ ಸುತ್ತೋಲೆಯಲ್ಲಿ ಮಂಡಳಿಯು ಸಾಕು ನಾಯಿಯನ್ನು ಪ್ರಕೃತಿ ಕರೆ ಮತ್ತು ವ್ಯಾಯಾಮ ಇತ್ಯಾದಿ ಕೆಲಸಗಳಿಗೆ ಕರೆದೊಯ್ಯುವ ಎಲ್ಲ ವಲಯಗಳಲ್ಲಿ ತಲಾ 20 ನಿಮಿಷಗಳಂತೆ ಮೂರು ಅವಧಿ (ಸ್ಲಾಟ್‌) ನಿರ್ಧರಿಸಬೇಕು ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರ ಎಡಬ್ಲ್ಯುಬಿಐ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ತಿಳಿಸಿದ್ದು ಸ್ಥಳೀಯ ಪೊಲೀಸ್ ಮತ್ತು ಆಡಳಿತಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ ಎಂದು ರಾಜ್ಯ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಮತ್ತು ವಕೀಲ ಪಿ.ಪಿ. ಕಾಕಡೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸಲಹೆಗಾರ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಾಧೀಶ ಅಮ್ಜದ್ ಸಯ್ಯದ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆ ನಡೆಸಿ ಸುತ್ತೋಲೆ ಹೊರಡಿಸಿ ಸಾಕುನಾಯಿ ಮಾಲೀಕರಿಗೆ ಮಾರ್ಗಸೂಚಿಗಳನ್ನು ಸೂಚಿಸಿದ್ದಾರೆ. ಈ ಮಾಲೀಕರು ಸಾಮಾಜಿಕ ಅಂತರ ನಿಯಮ ಸೇರಿ ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net