ಸೊಸೈಟಿ ಚುನಾವಣೆಯಲ್ಲಿ ಅಕ್ರಮದ ಆರೋಪ

S.P.Dinesh
Published on

ಶಿವಮೊಗ್ಗ: ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರ ಸ್ಥಾನಕ್ಕೆ ಜ.12ರಂದು ಮತದಾನ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಚುನಾವಣಾ ಕಣದಲ್ಲಿರುವ ಎಂ.ಉಮಾಶಂಕರ ಉಪಾದ್ಯ ಹಾಗೂ ಎಸ್.ಪಿ.ದಿನೇಶ್ ನೇತೃತ್ವದ ತಂಡ ಜಿಲ್ಲಾಧಿಕಾರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರನ್ನು ಒತ್ತಾಯಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ.ದಿನೇಶ್, ಮತದಾರರ ಪಟ್ಟಿ ಆಶ್ಚರ್ಯ ಮೂಡಿಸಿದೆ. ಮೃತಪಟ್ಟವರು, ವಿದೇಶದಲ್ಲಿ ನೆಲೆಸಿರುವವರು, ಹೊರ ಜಿಲ್ಲೆಯಲ್ಲಿರುವವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಇವರನ್ನೆಲ್ಲ ಕೈ ಬಿಟ್ಟು ನೈಜ ಮತದಾರರ ಪಟ್ಟಿಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿದೆ. ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಮತ್ತು ಇತರೆ ಆಮಿಷಗಳನ್ನೊಡ್ಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಬ್ಯಾಂಕ್‌ನ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಮತಪತ್ರ ಕೊಡುವ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮತ ಏಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿ ಕ್ಯಾಮರಾ ಹಾಕಬೇಉಕು. ನಕಲಿ ಮತದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಅಭ್ಯರ್ಥಿಗಳಾದ ಕೆ.ಜಿ.ಕುಮಾರ ಸ್ವಾಮಿ ಮಾತನಾಡಿ, ಎಸ್.ಡಿ.ಅನಂತರಾಮ್‌ಸಿಂಗ್, ಎಂ.ಉಮಾಶಂಕರ್ ಉಪಾಧ್ಯ ಹೆಚ್.ತುಳಸಿರಾಮ ಪ್ರಸಾದ್, ನರಸಿಂಹ ಗಂಧದಮನೆ, ಅ.ಮ.ಪ್ರಕಾಶ್, ಬಿ.ವಿ.ಭೀಮೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net