ಅಧ್ಯಾತ್ಮ ಲೋಕದ ಎಲ್ಲ ಪಂಥಗಳಿಗೂ ಅಲ್ಲಮಪ್ರಭು ಗುರು

allama
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಅಲ್ಲಮಪ್ರಭು ಜಯಂತಿಯಲ್ಲಿ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಆಯನೂರು ಮಂಜುನಾಥ್, ಬೆನಕಪ್ಪ, ಎಚ್.ಸಿ.ಯೋಗೇಶ್ ಇದ್ದರು.
Published on

ಶಿವಮೊಗ್ಗ: ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದ ಶೂನ್ಯಪೀಠದ ಮೊದಲ ಅಧ್ಯಕ್ಷ ಅಲ್ಲಮಪ್ರಭು. ಕನ್ನಡ ಅನುಭಾವ ಪರಂಪರೆ ಅಮೇಜಾನ್ ನದಿಯಂತೆ ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್, ಬಸವಕೇಂದ್ರ ಇತರ ಸಂಘಟನೆಗಳು ಅಲ್ಲಮ ಬಯಲಿನಲ್ಲಿ ಏರ್ಪಡಿಸಿದ್ದ ಅಲ್ಲಮಪ್ರಭು ಜಯಂತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಅತಿದೊಡ್ಡ ನದಿ ಅಮೇಜಾನನ್ನು ಸಿಹಿನೀರಿನ ಸಮುದ್ರ ಎಂದೇ ಕರೆಯುತ್ತಾರೆ. ಅದು ಸಾಗುವ ಮಾರ್ಗದಲ್ಲಿ ಸಿಗುವ ಎಲ್ಲ ನದಿ, ತೊರೆ, ಹಳ್ಳ, ಹೊಳೆಗಳನ್ನು ತನ್ನೊಂದಿಗೆ ಕರೆದೊಯ್ದು ಸಮುದ್ರ ಸೇರಿಸಿಬಿಡುತ್ತದೆ ಎಂದರು.

ಇದೇ ರೀತಿ ಅಲ್ಲಮಪ್ರಭು ತಾನು ಸಂಚಾರ ಮಾಡುತ್ತ ತನ್ನನ್ನು ಭೇಟಿಯಾದ ಎಲ್ಲರನ್ನೂ ಚಲನಶೀಲಗೊಳಿಸಿ, ಅವರ ಸಾಧನೆ ಹಾದಿಯಲ್ಲಿನ ಓರೆ ಕೊರೆಗಳನ್ನು ತಿದ್ದಿ ಬಯಲಿನೆಡೆಗೆ ಕೊಂಡೊಯ್ದಿದ್ದಾರೆ. ಅವರ ಪ್ರಭಾವಕ್ಕೊಳಗಾಗಿ ಬಯಲಿಗೆ ಸಾಗಿದವರಲ್ಲಿ ಎಲ್ಲರೂ ಅಧ್ಯಾತ್ಮ ಸಾಧಕರು. ಶೈವ, ವೈದಿಕ, ಜೈನ, ಬೌದ್ಧ, ಸಿದ್ಧ, ಸನ್ಯಾಸಿ, ಗೃಹಸ್ಥ ಹೀಗೆ ಅಲ್ಲಮಪ್ರಭುವಿನ ಪ್ರಭಾವಲಯಕ್ಕೆ ಬಾರದವರೆ ಇಲ್ಲ. ಹಿರಿಯ ವಿದ್ವಾಂಸ ಡಾ. ಮಲ್ಲೇಪುರಂ ಜಿ.ವೆಂಕಟೇಶ ಅವರ ಮಾತಿನಲ್ಲಿ ಹೇಳುವುದಾದರೆ, ಬುದ್ಧನಿಗಿಂತಲೂ, ತನ್ನ ಕಾಲದ ಅಧ್ಯಾತ್ಮ ಪರಂಪರೆಯನ್ನು ಹೆಚ್ಚು ಪ್ರಭಾವಿಸಿದ್ದು ಅಲ್ಲಮಪ್ರಭು ದೇವರು ಎಂದು ಹೇಳಿದರು.

ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ, ಶಿವಮೊಗ್ಗ ತಾಲೂಕು ಅಧ್ಯಕ್ಷ ಎಸ್.ಆರ್.ಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net