

ರಾಮನಗರ: ವಿಜಯವಾಣಿ ಪತ್ರಿಕೆ ಹೊರತಂದಿರುವ ಗ್ರಾಮ ಪಂಚಾಯಿತಿಗಳ ಸಾಧನೆಗಳನ್ನು ಬಿಂಬಿಸುವ ಗ್ರಾಮಭಾರತ ವಿಶೇಷ ಸಂಚಿಕೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಯಿತು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ಮಾಡಿವೆ. ಅಭಿವೃದ್ಧಿಯಿಂದ ದೂರ ಉಳಿದಿದ್ದ ಪಂಚಾಯಿತಿಗಳೂ ನರೇಗಾ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಿವೆ.ಅಭಿವೃದ್ಧಿಯೆಡೆಗೆ ಸಾಗಿವೆ.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ಪ್ರದೀಪ್, ತಹಸೀಲ್ದಾರ್ ಎಂ.ವಿಜಯಕುಮಾರ್ ಅವರು
ಗ್ರಾಮಭಾರತ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ವರದಿಗಾರ ವಿಭೂತಿಕೆರೆ ಶಿವಲಿಂಗಯ್ಯ,
ಪ್ರಸರಣ ವಿಭಾಗದ ರೋಹಿತ್ ಇದ್ದರು.
ರಸ್ತೆ,ಚರಂಡಿ,ಅಂತರ್ಜಲ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೆರೆ-ಕುಂಟೆ, ಕಾಲುವೆಗಳ ಅಭಿವೃದ್ಧಿ, ಚೆಕ್‌ಡ್ಯಾಂ, ಅಂಗನವಾಡಿ, ಗ್ರಂಥಾಲಯ, ಶಾಲಾ ಆಟದ ಮೈದಾನ, ಶಾಲೆಗಳ ಕಟ್ಟಡ ಸಮುದಾಯ ಭವನ ನಿರ್ಮಾಣ ಹೀಗೆ ಹಲವು ಅಭಿವೃದ್ಧಿ ಕೆಲಸಗಳು ನರೇಗಾ ಯೋಜನೆ ಮೂಲಕ ಕಾರ್ಯಗತವಾಗಿದೆ.
ರೈತರ ಅನುಕೂಲಕ್ಕಾಗಿ ವೈಯಕ್ತಿಕ ಕಾಮಗಾರಿಗಳು ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಸಮುದಾಯ ಕಾಮಗಾರಿಗಳು ಪಂಚಾಯಿತಿಗಳ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಂಡಿವೆ.
ಅಭಿವೃದ್ಧಿ ಯೋಜನೆಗಳ ಮೇಲೆ ಬೆಳಕು ಚೆಲ್ಲಲು, ಗ್ರಾಪಂ ಅಭಿವೃದ್ಧಿ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಪಂಚಾಯಿತಿ ಸಾಧನೆಗಳ ಕುರಿತು ವಿಜಯವಾಣಿ ‘ಗ್ರಾಮಭಾರತ’ ವಿಶೇಷ ಸಂಚಿಕೆಯನ್ನು ಹೊರತಂದಿದೆ. ಸಂಚಿಕೆ ನೋಡಿದ ಹಲವರು ಪತ್ರಿಕೆಯ ಜನಪರ ಕಾಳಜಿ, ಉತ್ತಮ ಬರಹ, ವರ್ಣರಂಜಿತ ಅಚ್ಚುಕಟ್ಟಾದ ಮುದ್ರಿತವಾಗಿರುವ ಸಂಚಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ರಾಮನಗರ ತಾಲೂಕು ಪಂಚಾಯಿತಿಯಲ್ಲಿ ತಹಸೀಲ್ದಾರ್ ಎಂ.ವಿಜಯಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್, ರಾಮನಗರದ ಕೃಷಿ ಇಲಾಖೆ ಆವರಣದಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್ ಹಾಗೂ ರೈತ ಸಂಘದ ಕಾರ್ಯಕರ್ತರು ಗ್ರಾಮಭಾರತ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಸೀಬಕಟ್ಟೆ ಕೃಷ್ಣಪ್ಪ, ರೈತ ಮುಖಂಡರಾದ ತುಂಬೇನಹಳ್ಳಿ ನಂಜಪ್ಪ, ಬಸವರಾಜು, ದಾಸರಹಳ್ಳಿ ಸೋಮಶೇಖರ್, ಚಿಕ್ಕೇನಹಳ್ಳಿ ನಾಗರಾಜ್‌ಸಿಂಗ್, ವಿಜಯವಾಣಿ ಜಿಲ್ಲಾ ವರದಿಗಾರ ಗಂಗಾಧರ್ ಭೈರಾಪಟ್ಟಣ, ವರದಿಗಾರ ಚಕ್ಕೆರೆ ಚೇತನ್ ಇತರರಿದ್ದರು.
ವಿಜಯವಾಣಿಗೆ ಧನ್ಯವಾದ: ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಶಸ್ಸಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರ ಸಹಕಾರ ಕಾರಣ. ಹಲವು ಗ್ರಾಪಂಗಳಲ್ಲಿ ನರೇಗಾ ಯೋಜನೆಯನ್ನು ಉಪಯೋಗಿಸಿಕೊಂಡು ಗ್ರಾಮಗಳು ಅಭಿವೃದ್ಧಿ ಸಾಧಿಸಬಹುದು ಎಂಬುದನ್ನು ತೋರಿಸಿಕೊಡಲಾಗಿದೆ. ನಮ್ಮೊಂದಿಗೆ ಸಹಕರಿಸುತ್ತಿರುವ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು, ನರೇಗಾ ಯೋಜನೆ ಅಧಿಕಾರಿ ವರ್ಗಕ್ಕೆ ಅಭಿನಂದನೆಗಳು. ಅಭಿವೃದ್ಧಿಪರ ಚಿತ್ರಣವನ್ನು ಜನರಿಗೆ ತಿಳಿಸಿದ ವಿಜಯವಾಣಿಗೆ ಧನ್ಯವಾದಗಳು. |ಪ್ರದೀಪ್ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮನಗರ ನರೇಗಾ ಯೋಜನೆ ಜಿಲ್ಲೆ, ತಾಲೂಕಿನಲ್ಲಿ ಯಶಸ್ವಿಯಾಗಿದೆ ಎಂಬುದನ್ನು ವಿಜಯವಾಣಿ ಪತ್ರಿಕೆ ಗ್ರಾಮ ಭಾರತ ವಿಶೇಷ ಸಂಚಿಕೆ ಮೂಲಕ ಜನರ ಮನಮುಟ್ಟುವಂತೆ ತಿಳಿಸಿಕೊಟ್ಟಿರುವುದು ಪತ್ರಿಕೆಯ ಸಾಮಾಜಿಕ ಬದ್ಧತೆ, ನಿಖರತೆ ತಿಳಿಸುತ್ತದೆ. ಪತ್ರಿಕೆ ಹೊರತಂದಿರುವ ಗ್ರಾಮಭಾರತ ಸಂಚಿಕೆ ನರೇಗಾ ಯೋಜನೆಯ ಪಕ್ವತೆಗೆ ಕೈಗನ್ನಡಿಯಂತಿದೆ. | ಎಂ.ವಿಜಯಕುಮಾರ್ ತಹಸೀಲ್ದಾರ್, ರಾಮನಗರ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ಉಪಯೋಗಿಸಿಕೊಂಡಿರುವ ಪಂಚಾಯಿತಿಗಳು ಅಭಿವೃದ್ಧಿ ಪಥದತ್ತ ಸಾಗಿದ್ದು, ಯೋಜನೆ ಹಾಗೂ ಅಭಿವೃದ್ಧಿಯನ್ನು ಜನರಿಗೆ ತಿಳಿಸಿಕೊಟ್ಟು ಬೇರೆ ಬೇರೆ ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಳ್ಳಲು, ಗ್ರಾಪಂ ಜನಪ್ರತಿನಿಧಿಗಳಲ್ಲಿ ಮತ್ತಷ್ಟು ಶಕ್ತಿ ತುಂಬಲು ಗ್ರಾಮಭಾರತ ವಿಶೇಷ ಸಂಚಿಕೆ ಮೂಲಕ ವಿಜಯವಾಣಿ ಪತ್ರಿಕೆ ಮುನ್ನುಡಿ ಬರೆದಿದೆ. ಅಭಿವೃದ್ಧಿ ಮೇಲೆ ಬೆಳಕು ಚೆಲ್ಲುವಂತಹ ಇಂತಹ ಮತ್ತಷ್ಟು ಸಂಚಿಕೆಗಳು ಹೊರಬರಲಿ. | ಮಂಜುನಾಥ್ ರಾಮನಗರ ಉಪವಿಭಾಗಾಧಿಕಾರಿ
ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ನಡೆಸಲಾಗಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಶೇಷ ಸಂಚಿಕೆ ಹೊಂದಿದೆ. ಈ ಬಗ್ಗೆ ಬೆಳಕು ಚೆಲ್ಲಿದ ವಿಜಯವಾಣಿ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಎಂ.ರವೀಶ್ ವಾತನಾಡಿ, ನರೇಗಾ ಯೋಜನೆ ಜಾರಿಗೊಳ್ಳದಿದ್ದರೆ ಗ್ರಾಮಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಶಾಸಕರ, ಸಂಸದರ ಅನುದಾನದ ಹೊರತಾಗಿಯೂ ಗ್ರಾಮಗಳ ಅಭಿವೃದ್ದಿ ಸಾಧ್ಯ ಎಂಬುದನ್ನು ನರೇಗಾ ಯೋಜನೆ ಸಾಬೀತುಪಡಿಸಿದೆ. ಈ ನಿಟ್ಟಿನಲ್ಲಿ ವಿವಿಧ ಪಂಚಾಯಿತಿಗಳ ಸಾಧನೆ ಬಗ್ಗೆ ವಾಹಿತಿ ಸಂಗ್ರಹಿಸಿ ಸಾವಾನ್ಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಹೊಸ ಮುನ್ನುಡಿ ಬರೆದಿದೆ ಎಂದರು.
ಚನ್ನಪಟ್ಟಣ: ವಿಜಯವಾಣಿ ದಿನಪತ್ರಿಕೆ ಹೊರತಂದಿರುವ ಗ್ರಾಪಂ ಸಾಧನೆ ಪಕ್ಷಿನೋಟ ಕುರಿತ ಗ್ರಾಮಭಾರತ ವಿಶೇಷ ಸಂಚಿಕೆಯನ್ನು ನಗರದ ತಾಪಂ ಸಭಾಂಗಣದಲ್ಲಿ ತಾಪಂ ಇಒ ಶಿವಕುಮಾರ್ ಸೋಮವಾರ ಲೋಕಾರ್ಪಣೆ ಮಾಡಿದರು.
ಮಾಧ್ಯಮ ಲೋಕದಲ್ಲಿ ಹೊಸತನದ ಹರಿಕಾರ ಎನಿಸಿರುವ ವಿಜಯವಾಣಿ ದಿನಪತ್ರಿಕೆ ತನ್ನದೇ ಆದ ಪಾತ್ರ ವಹಿಸುತ್ತಿದೆ. ಗ್ರಾಪಂಗಳ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ, ಪತ್ರಿಕೆ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ಮಾಡಿರುವ ಪಂಚಾಯಿತಿಗಳ ಕುರಿತು ವಿಶೇಷ ಸಂಚಿಕೆ ಹೊರತಂದಿರುವುದು ಶ್ಲಾಘನೀಯ ಎಂದರು.
ಪ್ರಸ್ತುತ ಗ್ರಾಮಾಭಿವೃದ್ಧಿಯಲ್ಲಿ ನರೇಗಾ ಯೋಜನೆ ತನ್ನದೇ ಛಾಪು ಮೂಡಿಸಿದೆ. ಅದರಂತೆ ಗ್ರಾಮಭಾರತ ಎಂಬ ಹೆಸರಿನಲ್ಲಿ ಗ್ರಾಪಂಗಳ ಸಾಧನೆ ಹಾಗೂ ಯೋಜನೆಗಳ ಮಾಹಿತಿ ಇರುವ ಈ ಸಂಚಿಕೆ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮಹಿಳೆಯರ ಸಾಥ್: ನಗರದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮವು ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರ ಸಮ್ಮುಖದಲ್ಲಿ ನಡೆದದ್ದು ವಿಶೇಷ. ಕೇಂದ್ರದ ಸಂಜೀವಿನಿ ಯೋಜನೆಯ ಸ್ವಸಹಾಯ ಸಂಘದ ಮುಖ್ಯಸ್ಥರು ಹಾಗೂ ಸದಸ್ಯರು ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.