ಮಕಾಡೆ ಮಲಗಿದ ಮೊದಲ ಹಾಲಿವುಡ್ ಚಿತ್ರ; ಆಲಿಯಾ ಭಟ್ ನಟಿಸಿರುವ ‘ಹಾರ್ಟ್ ಆಫ್​ ಸ್ಟೋನ್’ಗೆ ಮಿಶ್ರ ಪ್ರತಿಕ್ರಿಯೆ

alia
Published on

ಕಳೆದ ತಿಂಗಳಷ್ಟೇ ಆಲಿಯಾ ನಟಿಸಿದ್ದ ಬಾಲಿವುಡ್ ಸಿನಿಮಾ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಬಿಡುಗಡೆಯಾಗಿತ್ತು. ಕರಣ್ ಜೋಹರ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಆಲಿಯಾ, ರಣವೀರ್ ಸಿಂಗ್‌ಗೆ ನಾಯಕಿಯಾಗಿದ್ದರು. ಅದಾಗಿ ಎರಡೇ ವಾರಗಳಲ್ಲಿ ಶುಕ್ರವಾರ (ಆ.11) ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ರಿಲೀಸ್ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.

ಆಲಿಯಾ ನಟಿಸಿರುವ ಮೊದಲ ಹಾಲಿವುಡ್ ಚಿತ್ರವಿದು. ಟಾಪ್ ಹಾರ್ಪರ್ ನಿರ್ದೇಶನದ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ‘ವಂಡರ್ ವುಮನ್’ ಖ್ಯಾತಿಯ ಗಾಲ್ ಗಡೋಟ್, ಜೇಮಿ ಡಾರ್ನನ್, ಸೋಫಿ ಒಕೊನಿಡೊ, ಮೇಥಿಯಸ್ ಶ್ವೀೊರ್ ಜತೆ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಿತ್ರದಲ್ಲಿ ಅಂತಾರಾಷ್ಟ್ರೀಯ ಹ್ಯಾಕರ್ ಕಿಯಾ ಧವನ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಆದರೆ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ದಿನವೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಲಿಯಾ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net