ಹಾಕಿ ಇಂಡಿಯಾಗೆ ಆಲೇಮಾಡ ತ್ರಿಷಾ ಕಾವೇರಮ್ಮ ಆಯ್ಕೆ

Published on

ಗೋಣಿಕೊಪ್ಪಲು: ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ಚಾಂಪಿಯನ್‌ಷಿಪ್ ಪಂದ್ಯಾಟಕ್ಕೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಆಲೇಮಾಡ ತ್ರಿಷಾ ಕಾವೇರಮ್ಮ ಪಾಂಡಿಚೇರಿ ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.

15ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಷಿಪ್ ಪಂದ್ಯಾಟವು ಆ.1 ರಿಂದ 12ರವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಲಿದೆ. ಇವರು 2021ರಿಂದ 2024ರವರೆಗೆ ಪೊನ್ನಂಪೇಟೆ ಡಿವೈಎಸ್‌ಎಸ್ ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಹಾಗೂ ಮುಕಳಾಮಾಡ ಗಣಪತಿ ಅವರಲ್ಲಿ ತರಬೇತಿ ಪಡೆದು, ಪ್ರಸ್ತುತ ಮಡಿಕೇರಿ ಸಾಯಿ ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಪ್ರಸ್ತುತ ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಅಲೇಮಾಡ ನವೀನ್ ದೇವಯ್ಯ ಹಾಗೂ ಧನ್ಯಾ ಅವರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net