ಎಂಐಎಲ್‌ಎಚ್‌ಎಸ್‌ನಲ್ಲಿ ಸೆ.24, 25ರಂದು ‘ಅಲೆ’ ಸಾಹಿತ್ಯ ಉತ್ಸವ | MAHE Bengaluru

‘ವೇವ್ಸ್ ಆಫ್ ಹೋಪ್’ (ಭರವಸೆಯ ಅಲೆಗಳು) ಎಂಬ ವಿನೂತನ ಆಶಯದೊಂದಿಗೆ ಮೂಡಿಬರುತ್ತಿರುವ ಈ ಉತ್ಸವವು ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಬೆಳಗ್ಗೆ 9 ಗಂಟೆಗೆ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ
MAHE Bengaluru
ಸೆ.24, 25ರಂದು ‘ಅಲೆ’ ಸಾಹಿತ್ಯ ಉತ್ಸವ
Published on

ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಯಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ ಆ್ಯಂಡ್ ಸೋಷಿಯಲ್ ಸೈನ್ಸಸ್ನ (ಎಂಐಎಲ್‌ಎಚ್‌ಎಸ್‌) ಭಾಷಾ ಮತ್ತು ಸಾಹಿತ್ಯ ಅಧ್ಯಯನ ವಿಭಾಗವು ಸೆಪ್ಟೆಂಬರ್ 24 ಮತ್ತು 25ರಂದು ಎರಡು ದಿನಗಳ ‘ಅಲೆ’ ಸಾಹಿತ್ಯ ಉತ್ಸವವನ್ನು ಆಯೋಜಿಸಿದೆ.

‘ವೇವ್ಸ್ ಆಫ್ ಹೋಪ್’ (ಭರವಸೆಯ ಅಲೆಗಳು) ಎಂಬ ವಿನೂತನ ಆಶಯದೊಂದಿಗೆ ಮೂಡಿಬರುತ್ತಿರುವ ಈ ಉತ್ಸವವು ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಬೆಳಗ್ಗೆ 9 ಗಂಟೆಗೆ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ಈ ಉತ್ಸವದಲ್ಲಿ ಖ್ಯಾತ ಲೇಖಕ ಬೆನ್ಯಾಮಿನ್ ಅವರು ‘ಬಿಯಾಂಡ್ ದಿ ಪೇಜ್: ರೀಡಿಂಗ್ ಆ್ಯಸ್ ಎ ಬೀಕನ್ ಆಫ್ ಹೋಪ್’ ವಿಷಯ ಮಾತನಾಡಲಿದ್ದಾರೆ. ಬಳಿಕ ಪ್ರಮುಖ ಲೇಖಕಿ ಹಾಗೂ ಪ್ರಕಾಶಕಿ ಊರ್ವಶಿ ಬುಟಾಲಿಯಾ ಅವರಿಂದ ‘ಪ್ರಕಾಶನ, ಬರವಣಿಗೆ ಮತ್ತು ಸಕ್ರಿಯತೆ: ಸ್ತ್ರೀವಾದಿ ಜೀವನದ ಅವಲೋಕನ’ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

ಸೆಪ್ಟೆಂಬರ್ 25ರಂದು ಖ್ಯಾತ ಸಾಹಿತಿ ಗೋಗು ಶ್ಯಾಮಲಾ ಅವರೊಂದಿಗೆ ಸಾಹಿತ್ಯಕ ಸಂವಾದ, ಸಮಕಾಲೀನ ಕಾವ್ಯ ಹಾಗೂ ಪ್ರಕಾಶನ ರಂಗದ ಸವಾಲು–ಸಾಧ್ಯತೆಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಇದೇ ವೇಳೆ, ಶಾಲಾ ವಿದ್ಯಾರ್ಥಿಗಳಿಗಾಗಿ ಸುಚಿ ಗೋವಿಂದರಾಜನ್ ಅವರಿಂದ ಸೃಜನಶೀಲ ಬರವಣಿಗೆ ಕಾರ್ಯಾಗಾರ, ಸಮರ್ಥ್ ಮಹಾಜನ್ ಅವರ ಚಲನಚಿತ್ರ ಸಂವಾದದೊಂದಿಗೆ ‘ಬಾರ್ಡರ್‌ಲ್ಯಾಂಡ್ಸ್’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಲಿಟ್‌ಗಾಲಾ ಇರಲಿದೆ. ಸಂಜೆ ಕವಿ ಅಲೀನಾ ಸಾಬು ಅವರ ಕವಿತಾ ವಾಚನದೊಂದಿಗೆ ಎರಡು ದಿನಗಳ ಈ ಸಾಹಿತ್ಯ ಉತ್ಸವಕ್ಕೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net