

ಹಾವೇರಿ: ವಿದ್ಯಾಥಿರ್ಗಳಿಗೆ ಎನ್ಎಸ್ಎಸ್ ಶಿಬಿರ ಸಮಾಜ ಸೇವೆ ಕಲಿಸುವ ಜತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಾಚಾರ್ಯ ಪ್ರದಿಪ ಗದ್ದಿಗೌಡರ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಸಿಬಿ ಕೊಳ್ಳಿ ಪಾಲಿಟೆಕ್ನಿಕ್ ಎನ್ಎಸ್ಎಸ್ ಘಟಕದ ವತಿಯಿಂದ ತಾಲೂಕಿನ ಆಲದಕಟ್ಟಿ ಗ್ರಾಮದ ಸರ್ಕಾರಿ ತಾಲೂಕು ಮಾದರಿ ಪ್ರಾಥಮಿಕ ಶಾಲೆ ಹಾಗೂ ಕೋಡಿಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ನಿಂಗಪ್ಪ ನಿಂಬಕ್ಕನವರ, ಉಪಾಧ್ಯೆ ನಯನಾ ಬಾಕಿರ್, ಶಾಲೆಯ ಮುಖ್ಯಶಿಕ್ಷಕ ಜಿ.ಎನ್. ಜಾವೂರ, ಎನ್ಎಸ್ಎಸ್ ಯೋಜನಾಧಿಕಾರಿ ಸತೀಶ ಚೂರಿ, ನಾಗವೇಣಿ ತಳ್ಳಳ್ಳಿ, ರಶ್ಮಿ ನಂದಿ, ಗಂಗಾಧರಯ್ಯ ಸಾಲಿಮಠ, ಯು.ಎನ್. ಹೊಸಗೌಡರ, ಪ್ರದಿಪ ಎಚ್.ಎಸ್., ವಿಶ್ವನಾಥ ಕಾರಡಗಿ, ಮೋಹನ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.