

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಆ್ಯಕ್ಷನ್ ಸೀಕ್ವೆನ್ಸ್ ಬಗ್ಗೆ ಹೇಳುವ ಅಗತ್ಯವೆ ಇಲ್ಲ. ಅಕ್ಷಯ್ ತಮ್ಮ ಸಿನಿಮಾಗಳಲ್ಲಿ ಯಾವುದೇ ಬಾಡಿ ಡಬ್ ಇಲ್ಲದೆ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಸ್ವತಃ ಭಾಗಿಯಾಗುತ್ತಾರೆ. ಸದ್ಯ ಅಕ್ಷಯ್ ತಮ್ಮ ಮುಂದಿನ ಸಿನಿಮಾ ಖೇಲ್ ಖೇಲ್ ಮೇ ಸಿನಿಮಾದ ಪ್ರಚಾರದಲ್ಲಿ ಬಿಸಿಯಿದ್ದಾರೆ
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್, ಸಿನಿಮಾಗಳಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮಾಡಲು ಅವರಿಗೆ ಏನು ಸ್ಫೂರ್ತಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟಾಮ್ ಆ್ಯಂಡ್ ಜೆರ್ರಿಯನ್ನು ಎಲ್ಲರೂ ನೋಡುವುದು ಕಾಮಿಡಿ ಎಂಬ ದೃಷ್ಟಿಕೋನದಲ್ಲಿ. ಆದರೆ ಅಕ್ಷಯ್ ಕುಮಾರ್ ಅವರು ಟಾಮ್ ಆ್ಯಂಡ್ ಜೆರ್ರಿಯನ್ನು ಕಾಮಿಡಿ ಅಲ್ಲ, ಹಿಂಸೆ ಎಂದು ಹೇಳಿದ್ದಾರೆ.
ತಮ್ಮ ಸಾಹಸ ದೃಶ್ಯಗಳಿಗೆ ಟಾಮ್ ಆ್ಯಂಡ್ ಜೆರ್ರಿಯೇ ಸ್ಫೂರ್ತಿ ಎಂದು ಅಕ್ಷಯ್ ಹೇಳಿದ್ದಾರೆ. ಟಾಮ್ ಆ್ಯಂಡ್ ಜೆರ್ರಿ ಹಾಸ್ಯವಲ್ಲ, ಅದು ಹಿಂಸೆ. ನಾನು ನಿಮಗೆ ಒಂದು ರಹಸ್ಯವನ್ನು ಹೇಳುತ್ತೇನೆ. ನಾನು ಎಷ್ಟು ಆಕ್ಷನ್ (ದೃಶ್ಯಗಳನ್ನು) ಮಾಡಿದ್ದೇನೆ, ಬಹಳಷ್ಟು ಬಾರಿ ನಾನು ಅದಕ್ಕೆ ಟಾಮ್ ಆ್ಯಂಡ್ ಜೆರ್ರಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ತಿಳಿಸಿದರು.
ಅದಷ್ಟೇ ಅಲ್ಲ ನ್ಯಾಷನಲ್ ಜಿಯೋಗ್ರಫಿಕ್ನಿಂದಲೂ ಆ್ಯಕ್ಷನ್ ಸೀಕ್ವೆನ್ಸ್ಗಳಿಗೆ ಸಾಕಷ್ಟು ಸ್ಫೂರ್ತಿಪಡೆಯಬಹುದು. ನ್ಯಾಷನಲ್ ಜಿಯೋಗ್ರಫಿಕ್ನಲ್ಲಿ ಉತ್ತಮ ಸಾಹಸ ದೃಶ್ಯಗಳನ್ನು ನೋಡಬಹುದು. ಟಾಮ್ ಆ್ಯಂಡ್ ಜೆರ್ರಿ ಮತ್ತು ನ್ಯಾಷನಲ್ ಜಿಯೋಗ್ರಫಿಕ್ನಿಂದ ಕಲಿತಿರುವ ಸಾಹಸ ದೃಶ್ಯಗಳನ್ನು ಹೇಳುವುದು ಅಸಾಧ್ಯ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ತಾಪ್ಸಿ ಪನ್ನು , ಫರ್ದೀನ್ ಖಾನ್, ವಾಣಿ ಕಪೂರ್, ಆದಿತ್ಯ ಸೀಲ್, ಆಮಿ ವಿರ್ಕ್ ಮತ್ತು ಪ್ರಜ್ಞಾ ಜೈಸ್ವಾಲ್ ತಾರಾಗಣವಿದೆ. (ಏಜೆನ್ಸೀಸ್)