

Bollywood: 2005ರಲ್ಲಿ ಬಿಡುಗಡೆಯಾದ ‘ಬರ್ಸಾತ್’ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಬಾಲಿವುಡ್ ಸ್ಟಾರ್ಗಳಾದ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಸಂಬಂಧವಿದೆ ಎಂಬ ವದಂತಿ ಹಬ್ಬಿತ್ತು. ಈ ವಿಚಾರಕ್ಕೆ ನಟನ ಕುಟುಂಬದಲ್ಲಿ ಕಲಹ ನಡೆದು ಸಿನಿಮಾದಿಂದ ಹೊರ ನಡೆದಿದ್ದರು ಎನ್ನಲಾಗಿತ್ತು. ಈ ಕುರಿತು ಇದೀಗ ಆ ಚಿತ್ರದ ನಿರ್ದೇಶಕ ಸುನೀಲ್ ದರ್ಶನ್ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್ ಬಬ್ಬಲ್ಗೆ ಸಂದರ್ಶನ ನೀಡಿರುವ ನಿರ್ದೇಶಕ ಸುನೀಲ್ ದರ್ಶನ್, ಇಬ್ಬರ ನಡುವಿನ ಸಂಬಂಧದ ವದಂತಿ ನಡೆಯುತ್ತಿದ್ದಾಗ ಬರ್ಸಾತ್ ಸಿನಿಮಾದ ಪ್ರೋಡಕ್ಷನ್ ಕೆಲಸ ಶುರುವಾಗಿತ್ತು. ಇದರಿಂದ ಚಿತ್ರ ನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ಪರಿಣಾಮ ಬೀರಿತು. ಶೂಟಿಂಗ್ ನಡೆಯುವಾಗ ಅನೇಕ ವದಂತಿಗಳು ಹಬ್ಬಿದವು. ಇದರ ಪರಿಣಾಮ ಅಕ್ಷಯ್ ವೈಯಕ್ತಿಕ ಜೀವನದಲ್ಲಿ ಗೊಂದಲ ಶುರು ಆಯ್ತು. ಪ್ರಿಯಾಂಕಾ ಜೊತೆ ನಟಿಸದಂತೆ ಪತ್ನಿ ಟ್ವಿಂಕಲ್ ಖನ್ನಾ ಒತ್ತಡ ಹೇರಿದ್ದರು.
ಈ ಕುರಿತು ಅಕ್ಷಯ್ ನನ್ನ ಮುಂದೆ ಸಮಸ್ಯೆಗಳನ್ನು ಹೇಳಿ, ಚಿತ್ರದಲ್ಲಿ ಒಬ್ಬರನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಬಹುದೇ ಎಂದು ನನ್ನ ಕೇಳಿದರು. ನನ್ನ ಅಭಿಪ್ರಾಯದಲ್ಲಿ ಎಲ್ಲ ನಟರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವಿಶೇಷವಾಗಿ ಪುರುಷರು ಇನ್ನಷ್ಟು ಜವಾಬ್ದಾರಿಯುತರಾಗಿರಬೇಕು. ಮನುಷ್ಯನ ಸ್ವಭಾವವೇ ತಪ್ಪು ಮಾಡೋದು. ಆ ತಪ್ಪುಗಳನ್ನ ನಿರ್ಮಾಪಕರು ಹೊರುವುದು ವಿಧಿ. ಆ ಘಟನೆಗೆ ನಾನು ಪ್ರಿಯಾಂಕಾಳನ್ನು ಗುರಿ ಮಾಡಲು ಇಚ್ಚಿಸುವುದಿಲ್ಲ ಎಂದಿದ್ದಾರೆ.
ಬರ್ಸಾತ್ ಚಿತ್ರದಲ್ಲಿ ಒಂದು ಹಾಡು ಶೂಟಿಂಗ್ ಮಾಡುವುದಾಗಿ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾಗೆ ಹೇಳಿದ್ದೆ. ಬಳಿಕ ಹಲವು ಘಟನೆಗಳು ನಡೆದು ಅಕ್ಷಯ್ ಚಿತ್ರದಿಂದ ಹೊರನಡೆದರು. ನಂತರ ಬಾಬಿ ಡಿಯೋಲ್ ಅವರನ್ನು ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
ನಿರ್ದೇಶಕ ಸುನೀಲ್ ದರ್ಶನ್ ಈ ಸಂಬಂಧದ ಕುರಿತು ಇದೇ ಮೊದಲ ಬಾರಿ ಮಾತನಾಡಿಲ್ಲ, ಹಲವು ಬಾರಿ ಮಾತನಾಡಿದ್ದಾರೆ. ವಿಕ್ಕಿ ಲಾಲ್ವಾನಿ ಅವರಿಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ ವದಂತಿ ಬಗ್ಗೆ ಮಾತನಾಡಿದ್ದಾರೆ
"ಇದು ಅಕ್ಷಯ್ ಕುಮಾರ್, ಪ್ರಿಯಾಂಕಾ ಚೋಪ್ರಾ ಜೊತೆ ನಟಿಸಲು ಇಷ್ಟಪಟ್ಟಿಲ್ಲ ಎನ್ನುವ ಮಾತು ಅಲ್ಲ. ಪರಿಸ್ಥಿತಿಗಳು ಅಂತಹ ಹಂತಕ್ಕೆ ತಲುಪಿದ್ದವು. ಜನರು ಮತ್ತು ಮಾಧ್ಯಮಗಳು ಅವರಿಬ್ಬರ ನಡುವೆ ಸಂಬಂಧವಿದೆ ಎಂದು ಹೇಳತೊಡಗಿದಾಗ ಅಕ್ಷಯ್ ಪತ್ನಿಗೆ ಈ ಬಗ್ಗೆ ಗೊತ್ತಾಯಿತು. ನನಗೆ 18 ತಿಂಗಳು ಕಾಯಿಸಿಬಿಟ್ಟು, ಕೊನೆಗೆ ನಾನು ಈ ಸಿನಿಮಾದಲ್ಲಿ ನಟಿಸಲಾರೆ ಎಂದರು. ಇದನ್ನು ಕೇಳಿ ನನಗೆ ಶಾಕ್ ಆಗಿತ್ತು. ಮುಂದಿನ ಸಿನಿಮಾದಲ್ಲಿ ನಿನ್ನ ಜೊತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ರು. ಇದು ನನಗೆ ನಂಬಲಾಗದಂತಿತ್ತು ಎಂದಿದ್ದಾರೆ.
ಸುನೀಲ್ ದರ್ಶನ್ ಮತ್ತು ಅಕ್ಷಯ್ ಕುಮಾರ್ ಜಾನ್ವರ್, ಏಕ್ ರಿಶ್ತಾ, ಹಾಂ ಮೈನೇ ಭೀ ಪ್ಯಾರ್ ಕಿಯಾ, ತಲಾಶ್: ದಿ ಹಂಟ್ ಬಿಗಿನ್ಸ್..., ಅಂದಾಜ್ ಮುಂತಾದ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ನಂತರ ಇಬ್ಬರು ಸುಮಾರು 20 ವರ್ಷಗಳು ಕಾಲ ಪರಸ್ಪರ ಮಾತನಾಡದೆ ಇದ್ದರು. ಇದಕ್ಕೆ ವಿರುದ್ಧವಾಗಿ, ಅಕ್ಷಯ್ ಮತ್ತು ಪ್ರಿಯಾಂಕಾ ಅಂದಾಜ್, ಅತ್ರಾಜ್ ಹಾಗೂ ವಕ್ತ್: ದಿ ರೇಸ್ ಅಗೇಸ್ಟ್ ಟೈಮ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. (ಏಜೆನ್ಸೀಸ್)